
ರಮ್ಯಾ ಯಾಕ್ ಹಿಂಗ್ ಆಡ್ತಿದಾರೆ? ಸ್ಯಾಂಡಲ್‌ವುಡ್ ಕ್ವೀನ್ 'ಚೆಸ್' ಆಡ್ತಿದಾರಾ ಅಂತಿದಾರಲ್ರೀ..!
ಡಿಕೆ ಶಿವಕುಮಾರ್ ಅವರು ಆಡಿದ್ದ ಮಾತು ಸಂಪೂರ್ಣವಾಗಿ ತಪ್ಪಲ್ಲ. ನಟರು ಸಾರ್ವಜನಿಕರ ಮೇಲೆ ದೊಡ್ಡ ಮಟ್ಟದ ಪ್ರಭಾವವನ್ನು ಬೀರುತ್ತಾರೆ. ಡಾ. ರಾಜ್‌ಕುಮಾರ್ ಅವರು ಗೋಕಾಕ್ ಚಳುವಳಿಗೆ ಬೆಂಬಲ ನೀಡಿದ್ದು...
ಡಿ.ಕೆ. ಶಿವಕುಮಾರ್ ಚಿತ್ರರಂಗದ ಬಗ್ಗೆ ಕೊಟ್ಟಿದ್ದ ನಟ್ಟು ಬೋಲ್ಟು ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡಿದ್ರು ರಮ್ಯಾ, ಆದ್ರೇ ಈಗ ನೋಡಿದ್ರೆ ಏಕಾಏಕಿ ಯು ಟರ್ನ್ ತೆಗೆದುಕೊಂಡಿರೋ ರಮ್ಯಾ ಕಲಾವಿದರು ಅಂದ್ರೆ ಏನ್ ಬಿಟ್ಟಿ ಬಿದ್ದಿದ್ದೀವಾ..? ಕಲಾವಿದರು ರಾಜಕಾರಣಿಗಳಿಗೆ ಸಾಫ್ಟ್ ಟಾರ್ಗೆಟ್ ಆಗ್ತಾ ಇದ್ದಾರೆ ಅಂತ ಡೈಲಾಗ್ ಹೊಡೆದಿದ್ದಾರಾ..? ನಿನ್ನೆ ತನಕ ಪಾಲಿಟಿಕ್ಸ್ ಪರ ಇದ್ದ ರಮ್ಯ ಇಂದು ಸಿನಿಮಾದವರ ಕಡೆಗೆ ಬಂದಿದ್ದೇಕೆ..? ಆ ಕುರಿತ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
ಯೆಸ್ ಚಿತ್ರರಂಗದಲ್ಲಿ ಜೋರಾಗಿರೋ ನಟ್ಟು ಬೋಲ್ಟು ಚರ್ಚೆಯ ಅಖಾಡಕ್ಕೆ ನಮ್ಮ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕೂಡ ಧುಮುಕಿದ್ದಾರೆ. ರಮ್ಯಾ ಒಂದ್ ಕಾಲದಲ್ಲಿ ಕನ್ನಡ ಚಿತ್ರರಂಗದ ನಂ.1 ನಟಿಮಣಿಯಾಗಿದ್ದವರು.
ರಾಜಕೀಯದಲ್ಲೂ ತಮ್ಮದೇ ಸ್ಥಾನ ಪಡೆದಿದ್ದವರು. ಮಂಡ್ಯದ ಎಂ.ಪಿ ಆಗಿದ್ದವರು. ಸೋ ರಮ್ಯಾ ಸಿನಿಮಾ ವರ್ಸೆಸ್ ಪಾಲಿಟಿಕ್ಸ್ ಅನ್ನೋ ಫೈಟ್ ಬಂದಾಗ ಯಾರ ಪರ ಮಾತನಾಡ್ತಾರೆ ಅನ್ನೋ ಕುತೂಹಲ ಇತ್ತು. ಆದ್ರೆ ನಿರೀಕ್ಷೆಯಂತೆಯೇ ರಮ್ಯಾ ಮೊದಲು ಡಿ.ಕೆ.ಶಿ ಪರವಾಗೇ ಮಾತನಾಡಿದ್ರು.
ಹಂಪಿ ಉತ್ಸವದಲ್ಲಿ ಭಾಗಿಯಾಗಿದ್ದ ರಮ್ಯಾ ಈ ಕುರಿತ ಪ್ರಶ್ನೆಗೆ ಉತ್ತರಿಸ್ತಾ ಡಿ.ಕೆ ಸಾಹೇಬರು ಹೇಳಿದ್ರಲ್ಲಿ ತಪ್ಪೇನಿಲ್ಲಾ ಅಂತ ತಿಪ್ಪೆ ಸಾರಿಸಿದ್ರು. ರಮ್ಯಾ ಹೇಳಿ ಕೇಳಿ ಕಾಂಗ್ರೆಸ್ ಪಕ್ಷದವರು ಅದ್ರಲ್ಲೂ ಒಂದು ಕಾಲದಲ್ಲಿ ರಮ್ಯಾ ರಾಜಕೀಯದಲ್ಲಿ ಬೆಳೆಯೋಕೆ ಡಿ.ಕೆ ಶಿವಕುಮಾರ್ ಬೆಂಬಲ ನೀಡಿದ್ರು. ಆ ಋಣ ಹೇಗ್ ತಾನೇ ಬಿಟ್ಟು ಕೊಡ್ತಾರೆ. ಸೋ ರಮ್ಯಾ ಸಹಜವಾಗೇ ತನ್ನ ಪಾರ್ಟಿಯ ನಾಯಕರ ಪರ ನಿಂತಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಈಗ ನೋಡಿದ್ರೆ ರಮ್ಯಾ ಏಕಾಏಕಿ ಉಲ್ಟಾ ಹೊಡೆದಿದ್ದಾರೆ.
ಡಿಕೆ ಶಿವಕುಮಾರ್ ಅವರು ಆಡಿದ್ದ ಮಾತು ಸಂಪೂರ್ಣವಾಗಿ ತಪ್ಪಲ್ಲ. ನಟರು ಸಾರ್ವಜನಿಕರ ಮೇಲೆ ದೊಡ್ಡ ಮಟ್ಟದ ಪ್ರಭಾವವನ್ನು ಬೀರುತ್ತಾರೆ. ಡಾ. ರಾಜ್‌ಕುಮಾರ್ ಅವರು ಗೋಕಾಕ್ ಚಳುವಳಿಗೆ ಬೆಂಬಲ ನೀಡಿದ್ದು ಇದಕ್ಕೆ ಅದ್ಭುತ ಉದಾಹರಣೆ.
ಕಲಾವಿದರು ಯಾವುದೇ ವಿಚಾರಕ್ಕೆ ಹೇಳಿಕೆ ನೀಡಬೇಕೋ ಇಲ್ಲವೋ ಎಂಬುದು ಅವರ ಆದ್ಯತೆ. ಚಿತ್ರರಂಗದಲ್ಲಿರುವ ನನ್ನ ಸ್ನೇಹಿತರಲ್ಲಿ ಹಲವರು ತಮ್ಮ ಅಭಿಪ್ರಾಯವನ್ನು ಖಾಸಗಿಯಾಗಿ ಹಂಚಿಕೊಳ್ಳುತ್ತಾರೆ, ಆದರೆ ಸಾರ್ವಜನಿಕವಾಗಿ ಹೇಳುವುದನ್ನು ದೂರ ಇಡುತ್ತಾರೆ, ಏಕೆಂದರೆ ಅವರ ಕೆಲಸ ನಿರಂತರವಾಗಿ ವಿಮರ್ಶೆಗೆ ಒಳಗಾಗಬಹುದು ಅಥವಾ ಅವರ ಪ್ರಚಾರಗಳಿಗೆ ಅಡ್ಡಿಯಾಗಬಹುದು.
ನಟಿಯರು ಮತ್ತು ಮಹಿಳೆಯರು ರಾಜಕೀಯ ನಾಯಕರಿಗೆ ಸುಲಭ ಗುರಿಯಾಗುತ್ತಾರೆ. ವಿಶೇಷವಾಗಿ, ನಾಯಕರು ಅವರ ವಿರುದ್ಧ ಬೆದರಿಕೆ ಒಡ್ಡುವುದು ಮತ್ತು ದೌರ್ಜನ್ಯ ನಡೆಸುವುದನ್ನು ತೊರೆದು, ಈ ಧೋರಣೆಯನ್ನು ಬಿಡಬೇಕು. ಇದೇ ಕಾರಣಕ್ಕೆ ಕಲಾವಿದರು ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ.
ಹೌದು ರಮ್ಯಾ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಕಲಾವಿದರು ರಾಜಕಾರಣಿಗಳಿಗೆ ಸಾಫ್ಟ್ ಟಾರ್ಗೆಟ್ ಆಗ್ತಾ ಇದ್ದಾರೆ. ಹಿಂಗೆಲ್ಲಾ ಮಾತನಾಡೋದು ಸರಿ ಅಲ್ಲ ಅಂದಿದ್ದಾರೆ. ಅಷ್ಟಕ್ಕೂ ರಮ್ಯಾ ಹಿಂಗೆ ಯು ಟರ್ನ್ ಹೊಡೆಯೋಕೆ ಕಾರಣ ಮಂಡ್ಯ ಶಾಸಕ ರವಿ ಗಣಿಗ ಕೊಟ್ಟ ಹೇಳಿಕೆ.
ಸುದೀಪ್, ರಶ್ಮಿಕಾ ವಿರುದ್ದ ನೇರಾನೇರ ವಾಗ್ದಾಳಿ ಮಾಡಿದ್ದ ಶಾಸಕ ರವಿ ಗಣಿಗ, ಇದು ಲಾಸ್ಟ್ ವಾರ್ನಿಂಗ್ ಸಿನಿಮಾದವರಿಗೆ ಸಬ್ಸಿಡಿ ಕೊಡೋದನ್ನ ನಿಲ್ಲಿಸ್ತಿವಿ ಅಂತ ಅಬ್ಬಿರಿಸಿದ್ರು. ರಮ್ಯಾ ಹೇಳಿ ಕೇಳಿ ಮಂಡ್ಯ ಮಾಜಿ ಸಂಸದೆ. ಮಂಡ್ಯದ ಹೊಸ ಶಾಸಕರ ಈ ಅಬ್ಬರ ಕಂಡು ಮಂಡ್ಯದಲ್ಲಿ ನನಗಿಂತ ಇವರದ್ದೇ ಜಾಸ್ತಿ ಹವಾ ಆದ್ರೆ ಹೆಂಗೆ ಅಂತ ರಮ್ತಾ ಏಕಾಏಕಿ ಸಿನಿಮಾ ಕಲಾವಿದರ ಪರ ನಿಂತುಕೊಂಡಂತೆ ಕಾಣ್ತಾ ಇದೆ.
ಒಟ್ನಲ್ಲಿ ಅತ್ತ ಡಿಕೆಶಿ ನಟ್ಟು ಬೋಲ್ಟು ಟೈಟ್ ಮಾಡ್ತಿವಿ ಅಂದಿದ್ದರ ಬಗ್ಗೆ ರಮ್ಯಾ ಮಾತನಾಡ್ತಾ ಇಲ್ಲ. ಆದ್ರೆ ಬೇರೆ ರಾಜಕಾರಣಿಗಳು ಆಡಿದ ಮಾತು ತಪ್ಪು ಅಂತಿದ್ದಾರೆ. ಒಮ್ಮೆ ರಾಜಕೀಯದವರನ್ನ ಬೆಂಬಲಿಸೋ ರಮ್ಯಾ ಇನ್ನೊಮ್ಮೆ ಕಲಾವಿದರ ಪರ ಮಾತನಾಡ್ತಾರೆ. ಇವರ ಮಾತು ಕೇಳಿದವರು ಇದು ಡಬಲ್ ಸ್ಟಾಂಡರ್ಟ್ ಅಲ್ವಾ ಅಂತ ಪದ್ಮಾವತಿಗೆ ಪ್ರಶ್ನೆ ಮಾಡ್ತಾ ಇದ್ದಾರೆ.