
ಸಿದ್ಧರಾಮಯ್ಯ ಬಜೆಟ್ನಲ್ಲಿ ಬರಪೂರ ಕೊಡುಗೆ! ಕೈಗಾರಿಕಾ ನೀತಿಯಡಿ ಚಿತ್ರರಂಗ!
ಕನ್ನಡ ಸಿನಿಮಾಗಳಿಗಾಗಿ ಒಟಿಟಿ, ಕೈಗಾರಿಕಾ ನೀತಿಯಡಿ ಚಿತ್ರರಂಗ..! ಮೈಸೂರಿನಲ್ಲಿ ಫಿಲಂ ಸಿಟಿಗೆ 150 ಎಕರೆ ಜಮೀನು..!
ಫಿಲಂ ಸಿಟಿಗೆ 500 ಕೋಟಿ ಹಣ ಮೀಸಲು..! ಮಲ್ಟಿಫೆಕ್ಸ್ ಚಿತ್ರಮಂದಿರಗಳಲ್ಲಿ ಏಕರೂಪ ದರ ನಿಗದಿ..! ಇನ್ನೇನಿದೆ ನೋಡಿ..
ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ ನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬ ಮಾತು ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ಈ ಮಾತು ಕೇಳಿ ಬರ್ತಾನೆ ಇದೆ. ಇನ್ನೂ.. ಮಲ್ಟಿಪ್ಲೆಕ್ಸ್‌ನವರದ್ದು ಕಾಸ್ಟ್ಲೀ ದುನಿಯಾ. ಮೂಗುದಾರ ಹಾಕುವವರು ಯಾರು ಇಲ್ಲ. ಅವರು ಉಂಡಿದ್ದೇ ಉಗಾದಿ.. ಉಟ್ಟಿದ್ದೇ ದೀಪಾವಳಿ.. ಅನ್ನುವುದು ಬಹುತೇಕ ಜನಸಾಮಾನ್ಯರ ಅಭಿಪ್ರಾಯ. ಭಟ್ ಇದಕ್ಕೆಲ್ಲ ಈಗ ರಾಜ್ಯ ಸರ್ಕಾರ ಕಡಿವಾಣ ಹಾಕಿದೆ. ಮಲ್ಟಿ ಫ್ಲೆಕ್ಸ್ಗಳ ನಟ್ಟು ಬೋಲ್ಟನ್ನ ರಾಜ್ಯ ಸರ್ಕಾರ ಟೈಟ್ ಮಾಡಿದೆ.
ಸಿನಿಮಾ ಜಗತ್ತಿನ ದುಡ್ಡ ಯಾರ್ ಹತ್ರಾ ಇದೆ ಅಂದ್ರೆ ಸಿನಿಮಾ ಮಂದಿ ಹೇಳುತ್ತಿದ್ದದ್ದು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳ ಬಗ್ಗೆ. ಯಾಕಂದ್ರೆ ಇವರು ಇಟ್ಟಿದ್ದೇ ರೇಟು. ಕೊಟ್ಟಿದ್ದೇ ಟಿಕೆಟು ಅನ್ನೊ ಹಾಗಿತ್ತು ಕರ್ನಾಟಕದಲ್ಲಿರೋ ಮಲ್ಟಿಫ್ಲೆಕ್ಸ್ಗಳ ಹಾವಳಿ. ಈಗ ಈ ಮಲ್ಟಿಫೆಕ್ಸ್ಗಳ ನಟ್ಟು ಬೋಲ್ಟನ್ನ ರಾಜ್ಯ ಸರ್ಕಾರ ಫುಲ್ ಟೈಟ್ ಮಾಡಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..