
'ಹಿಟ್ಲರ್ ಕಲ್ಯಾಣ' ಮಲೈಕಾ ಹುಟ್ಟುಹಬ್ಬಕ್ಕೆ 'ವಿದ್ಯಾಪತಿ'ಯ ಸ್ಪೆಷಲ್ ಗಿಫ್ಟ್!
ಇಂದು ಮಲೈಕಾ ವಸುಪಾಲ್ ಜನ್ಮದಿನ. ಅವರ ಹುಟ್ಟುಹಬ್ಬದ ವಿಶೇಷವಾಗಿ ವಿದ್ಯಾಪತಿ ಬಳಗದಿಂದ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ವಿದ್ಯಾಪತಿ ಸಿನಿಮಾದಲ್ಲಿ ಮಲೈಕಾ ಅವರ ಮೊದಲ ಝಲಕ್ ಅನಾವರಣ ಮಾಡಲಾಗಿದೆ. ಕರಾಟೆ ಗೆಟಪ್ ತೊಟ್ಟಿರುವ..
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಡವಟ್ಟು ರಾಣಿ ಲೀಲಾ ಆಗಿ ನಟಿಸಿ ಸೈ ಎನಿಸಿಕೊಂಡ ಬೆಡಗಿ ಮಲೈಕಾ ವಸುಪಾಲ್ ಉಪಾಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಬಲಗಾಲಿಟ್ಟಿದ್ದು ಗೊತ್ತೇ ಇದೆ. ಈಗ ವಿದ್ಯಾಪತಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇಂದು ಮಲೈಕಾ ವಸುಪಾಲ್ ಜನ್ಮದಿನ. ಅವರ ಹುಟ್ಟುಹಬ್ಬದ ವಿಶೇಷವಾಗಿ ವಿದ್ಯಾಪತಿ ಬಳಗದಿಂದ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ವಿದ್ಯಾಪತಿ ಸಿನಿಮಾದಲ್ಲಿ ಮಲೈಕಾ ಅವರ ಮೊದಲ ಝಲಕ್ ಅನಾವರಣ ಮಾಡಲಾಗಿದೆ. ಕರಾಟೆ ಗೆಟಪ್ ತೊಟ್ಟಿರುವ ನಾಯಕ ನಾಗಭೂಷಣ್ ಗೆ ಮಲೈಕಾ ವಸುಪಾಲ್ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ.
ಸದ್ಯ ತಮ್ಮ ಜನ್ಮದಿನದ ಖುಷಿಯಲ್ಲಿ ತೇಲಾಡುತ್ತಿದ್ದ ಮಲೈಕಾ, ವಿದ್ಯಾಪತಿಯ ಸಿನಿಮಾದ ಫಸ್ಟ್ ಲುಕ್ ಲಾಂಚ್ ನೋಡಿ ಭಾರೀಓ ಖುಷಿಯಾಗಿದ್ದಾರೆ. ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ..