Asianet Suvarna News Asianet Suvarna News

ಪ್ಯಾನ್ ಇಂಡಿಯಾ ತುಂಬೆಲ್ಲಾ ಮಾರ್ಟಿನ್​​​ ಚಂಡಮಾರುತ: ಮೂರೇ ದಿನದಲ್ಲಿ ದಾಖಲೆಗಳ ಮಹಾ ಶೂರನಾದ ಧ್ರುವ ಸರ್ಜಾ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಟ್ಟ ಗುರಿ ತಲುಪಿದ್ದಾರೆ. ಅದು ಮಾರ್ಟಿನ್ ಟ್ರೈಲರ್​​ನಿಂದ. ಪ್ಯಾನ್ ಇಂಡಿಯಾ ಸ್ಟಾರ್​ ಪಟ್ಟಕ್ಕಾಗಿ ಇಂಡಿಯನ್​​ ಅವತಾರ ಎತ್ತಿರೋ ಆಕ್ಷನ್ ಪ್ರಿನ್ಸ್​ ಈಗ ಪ್ಯಾನ್ ಇಂಡಿಯಾ ತುಂಬೆಲ್ಲಾ ಮಾರ್ಟಿನ್ ಟ್ರೈಲರ್​ ಚಂಡಮಾರುತವೆಬ್ಬಿಸಿದ್ದಾರೆ. 
 

First Published Aug 9, 2024, 6:49 PM IST | Last Updated Aug 9, 2024, 6:49 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ಚಿತ್ರ ಜಗತ್ತಿನ ಸೆನ್ಸೇಷನ್. ಅದಕ್ಕೆ ಕಾರಣ ಮೊನ್ನೆಯಷ್ಟೆ ಬಿಡುಗಡೆ ಆದ ಮಾರ್ಟಿನ್ ಟ್ರೈಲರ್. ಇಷ್ಟು ದಿನ ಸ್ಯಾಂಡಲ್​ವುಡ್​ನಲ್ಲಿ ಮಾತ್ರ ರೆಕಾರ್ಡ್​ ಮೇಲೆ ರೆಕಾರ್ಡ್​ ಬರೆಯುತ್ತಿದ್ದ ಧ್ರುವ ಈಗ ಪ್ಯಾನ್​ ಇಂಡಿಯಾದಲ್ಲಿ ಬಿಗ್ ಬಿಗ್​ ರೆಕಾರ್ಡ್​ಗಳನ್ನ ತನ್ನ ಹೆಸರಿಗೆ ಗೀಚಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಮಾರ್ಟಿನ್ ಟ್ರೈಲರ್ ತೂಫಾನ್ ಎದ್ದಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಟ್ಟ ಗುರಿ ತಲುಪಿದ್ದಾರೆ. ಅದು ಮಾರ್ಟಿನ್ ಟ್ರೈಲರ್​​ನಿಂದ. ಪ್ಯಾನ್ ಇಂಡಿಯಾ ಸ್ಟಾರ್​ ಪಟ್ಟಕ್ಕಾಗಿ ಇಂಡಿಯನ್​​ ಅವತಾರ ಎತ್ತಿರೋ ಆಕ್ಷನ್ ಪ್ರಿನ್ಸ್​ ಈಗ ಪ್ಯಾನ್ ಇಂಡಿಯಾ ತುಂಬೆಲ್ಲಾ ಮಾರ್ಟಿನ್ ಟ್ರೈಲರ್​ ಚಂಡಮಾರುತವೆಬ್ಬಿಸಿದ್ದಾರೆ. 

ಮೂರೇ ಮೂರು ದಿನದಲ್ಲಿ ಮಾರ್ಟಿನ್ ಮಹಾ ಶೂರನಾಗಿದ್ದಾನೆ ಮಾರ್ಟಿನ್. ಈ ವರ್ಷ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನ ಸೆಳೆದ ಸಿನಿಮಾದ ಟ್ರೈಲರ್ ಅಂದ್ರೆ ಮಾರ್ಟಿನ್. ಪ್ರಭಾಸ್​ರ ಕಲ್ಕಿ ಟ್ರೈಲರ್​ ಬಗ್ಗೆ ಬಂದ ರಿವ್ಯೂ ಮರೆಸೋ ಹಾಗೆ ಮಾರ್ಟಿನ್ ಟ್ರೈಲರ್​​ ಪ್ರೇಕ್ಷಕರ ಮನ ಗೆದ್ದಿದೆ. ಮಾರ್ಟಿನ್ ಟ್ರೈಲರ್​​ 3ರೇ ದಿನದಲ್ಲಿ 33 ಮಿಲಿಯನ್ ವೀಕ್ಷಣೆ ಪಡೆದಿದೆ. ಟ್ರೈಲರ್ನಲ್ಲೇ 'ಮಾರ್ಟಿನ್' ಮ್ಯಾಜಿಕ್ ನಡೆಯುತ್ತಿದೆ. ಸೋಷಿಯಲ್ ಮೀಡಿಯಾ ಟ್ರೆಂಡ್​ನಲ್ಲಿ ಟಾಪ್​​​ನಲ್ಲಿ ಬಂದು ಕೂತಿರೋ ಮಾರ್ಟಿನ್​​ ಯುನಿವರ್ಸೆಲ್ ಟ್ರೈಲರ್​​ಗೆ ಸಿಗುತ್ತಿರೋ ಜನ ಬೆಂಬಲ ನೋಡಿದ್ರೆ, ಡ್ರಿಪ್​​ನಲ್ಲಿ ಉಸಿರಾಡುತ್ತಿರೋ ಸ್ಯಾಂಡಲ್​ವುಡ್​​ಗೆ ಮಾರ್ಟಿನ್​ ಸಂಜೀವಿನಿಯಾಗಿ ಬಂದಂತೆ ಕಾಣುತ್ತಿದೆ. ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿರೋ ಮಾರ್ಟಿನ್​ ಅಕ್ಟೋಬರ್ 11ಕ್ಕೆ ಹಲವು ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.

Video Top Stories