ಆ ಒಂದು ಕಾರಣಕ್ಕೆ ಅಪ್ಪ-ದೊಡ್ಡಪ್ಪ ಫಿಲ್ಡ್‌ಗೆ ಎಂಟ್ರಿ ಕೊಟ್ರು; ರೋಶನ್‌ ಅಗ್ನಿ ಶ್ರೀಧರ್‌

ಹೆಡ್ ಬುಷ್ ಸಿನಿಮಾದ ಬಗ್ಗೆ ಮತ್ತು ಡಾನ್ ಜಯರಾಜ್ ಬಗ್ಗೆ ಅಥ್ಲೀಟ್, ಬಚ್ಚನ್ ಪುತ್ರ ರೋಶನ್ ಅಗ್ನಿ ಶ್ರೀಧರ್ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್ ವುಡ್‌ನಲ್ಲಿ ಮತ್ತೊಂದು ನಿರೀಕ್ಷೆಯ ಸಿನಿಮಾ ರಿಲೀಸ್ ಗೆ ಸಜ್ಜಾಗಿದೆ. ಹೌದು ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾ ಅದ್ದೂರಿಯಾಗಿ ಅಭಿಮಾನಿಗಳ ಮುಂದೆ ಬರ್ತಿದೆ. ಹೆಡ್ ಬುಷ್ ಮಾಡಿ ಡಾನ್ ಜಯರಾಜ್ ಬಗ್ಗೆ ಇರುವ ಸಿನಿಮಾ. ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ಮಿಂಚಿದ್ದಾರೆ. ಅಂದಹಾಗೆ ಈ ಸಿನಿಮಾದ ಜಯರಾಜ್ ಆಪ್ತ ಬಚ್ಚನ್ ಪುತ್ರ ರೋಶನ್ ಅಗ್ನಿ ಶ್ರೀಧರ್ ಮಾತನಾಡಿದ್ದಾರೆ. ರೋಶನ್ ಮೊದಲ ಬಾರಿಗೆ ಹೆಡ್ ಬುಷ್ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದಾರೆ. ಬಚ್ಚನ್ ಪುತ್ರ ಆಗಿದ್ದರೂ ಸಹ ರೋಶನ್ ತನ್ನ ಹೆಸರಿನ ಜೊತೆ ಅಗ್ನಿ ಶ್ರೀಧರ್ ಹೆಸರು ಸೇರಿಸಿಕೊಂಡಿದ್ದಾರೆ. ತಂದೆಗಿಂತ ಅಗ್ನಿ ಶ್ರೀಧರ್ ಅವರನ್ನು ಹೆಚ್ಚು ಇಷ್ಟ ಪಡುವ ರೋಶನ್ ಅವರ ಹೆಸರನ್ನೇ ಸೇರಿಸಿಕೊಂಡಿದ್ದಾರೆ. ತಾಯಿ ಇದ್ದಿದ್ದರೇ ತುಂಬಾ ಖುಷಿ ಪಡುತ್ತಿದ್ದರು ಎಂದು ರೋಶನ್ ಹೇಳಿದರು. 

Related Video