ಶತ ದಿನೋತ್ಸವದ ಸಂಭ್ರಮದಲ್ಲಿ ಕಾಂತಾರ: ಬೆಳ್ಳಿತೆರೆ ಮೇಲೆ ಸೆಂಚುರಿ ಭಾರಿಸಿದ ರಿಷಬ್

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನದ ಕಾಂತಾರ ಸಿನಿಮಾ ಇದೀಗ 100 ದಿನ ಪೂರೈಸಿ ಸಂಭ್ರಮಿಸುತ್ತಿದೆ.

Share this Video
  • FB
  • Linkdin
  • Whatsapp

ಕನ್ನಡಿಗರ ಹೆಮ್ಮೆಯ ಸಿನಿಮಾ ಕಾಂತಾರ ಸಿನಿಮಾದ ದಾಖಲೆ ಸಧ್ಯಕ್ಕೆ ಯಾರು ಮುರಿಯೋಕೆ ಆಗೋದಿಲ್ಲ. ದಾಖಲೆ ಮಾಡುತ್ತಲೇ ಕನ್ನಡದ ಹೆಸರನ್ನು ವಿಶ್ವದೆಲ್ಲೆಡೆ ತೆಗೆದುಕೊಂಡು ಹೋಗಿದೆ ಈ ಸಿನಿಮಾ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿದ್ದ ಕಾಂತಾರ ಸಿನಿಮಾ, ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಚಿತ್ರದ ಎದುರೇ ರಿಲೀಸ್ ಆಗಿತ್ತು. ಜನ ತಮ್ಮ ಚಿತ್ರವನ್ನು ಗೆಲ್ಲಿಸುತ್ತಾರೆ ಅನ್ನೋ ಭರವಸೆಯ ಮಾತುಗಳನ್ನೆ ಆಡಿದ್ದರು ರಿಷಬ್. ರಿಲೀಸ್ ಆದ ಮರು ದಿನದಿಂದಲೇ ಕಾಂತಾರ ಹೊಸ ಅಲೆಯನ್ನೇ ಎಬ್ಬಿಸಿತ್ತು. 15ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ 450 ಕೋಟಿಗೂ ಹೆಚ್ಚು ಕಲೆಕ್ಷನ್ ಆಯ್ತು. ಸಿನಿಮಾ ಇದೀಗ 100 ದಿನ ಪೂರೈಸಿ ಸಂಭ್ರಮಿಸುತ್ತಿದೆ.

Related Video