ವರ್ಷದ ಕೊನೆಯಲ್ಲಿ ಕಿಚ್ಚ-ಉಪ್ಪಿ ಭಾರೀ ಬಾಕ್ಸಾಫೀಸ್ ವಾರ್!

ಮ್ಯಾಕ್ಸ್‌ ಹಾಗು ಯುಐ ಎರಡು ಚಿತ್ರಗಳೂ ಬಿಗ್ ಬಜೆಟ್ ಹಾಗೂ ಬಹುಭಾಷಾ ಚಿತ್ರಗಳಾಗಿವೆ. ಈಗಿನ ಟ್ರೆಂಡ್‌ ಮೂಲಕ ಹೇಳಬೇಕು ಎಂದರೆ, ಅವೆರಡೂ ಪ್ಯಾನ್ ಇಂಡಿಯಾ ಸಿನಿಮಾ. ಮೇಕಿಂಗ್ ಹಾಗೂ ಬಜೆಟ್ ವಿಷಯದಲ್ಲಿ ಕೂಡ ಎರಡೂ ..

Share this Video
  • FB
  • Linkdin
  • Whatsapp

ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಟನೆ-ನಿರ್ದೇಶನದ ಬಹುನಿರೀಕ್ಷೆಯ ಯುಐ (UI) ಸಿನಿಮಾ ಡಿಸೆಂಬರ್ 20ಕ್ಕೆ ತೆರೆಗೆ ಬರೋದು ಫಿಕ್ಸ್ ಆಗಿದೆ. ಈ ನಡುವೆ ಕಿಚ್ಚ ಸುದೀಪ್ (Kichcha Sudeep) ನಟನೆಯ ಮ್ಯಾಕ್ಸ್ (Max) ಕೂಡ ರಿಲೀಸ್​​ಗೆ ಸಜ್ಜಾಗಿದ್ದು ಡಿಸೆಂಬರ್ 25ಕ್ಕೆ ತೆರೆಗೆ ಬರೋ ತಯಾರಿಯಲ್ಲಿದೆ. ಅಲ್ಲಿಗೆ ಒಂದೇ ವಾರದ ಗ್ಯಾಪ್​ನಲ್ಲಿ ಎರಡು ಬಿಗ್ ಸ್ಟಾರ್​ಗಳ ಸಿನಿಮಾ ತೆರೆಗೆ ಬರಲಿದ್ದು, ಇಬ್ಬರ ನಡುವೆ ಬಾಕ್ಸ್​ಆಫೀಸ್ ಫೈಟ್ ನಡೆಯೋದು ಬಹುತೇಕ ಫಿಕ್ಸ್ ಆಗಿದೆ.

ಮ್ಯಾಕ್ಸ್‌ ಹಾಗು ಯುಐ ಎರಡು ಚಿತ್ರಗಳೂ ಬಿಗ್ ಬಜೆಟ್ ಹಾಗೂ ಬಹುಭಾಷಾ ಚಿತ್ರಗಳಾಗಿವೆ. ಈಗಿನ ಟ್ರೆಂಡ್‌ ಮೂಲಕ ಹೇಳಬೇಕು ಎಂದರೆ, ಅವೆರಡೂ ಪ್ಯಾನ್ ಇಂಡಿಯಾ ಸಿನಿಮಾ. ಮೇಕಿಂಗ್ ಹಾಗೂ ಬಜೆಟ್ ವಿಷಯದಲ್ಲಿ ಕೂಡ ಎರಡೂ ಸಿನಿಮಾಗಳೂ ನಾನಾ ನೀನಾ ಎಂಬಂತಿದ್ದು, ರಿಲೀಸ್ ಬಳಿಕ ಯಾವ ಸಿನಿಮಾ ಹೆಚ್ಚಿನ ಗಳಿಕೆ ಹಾಗೂ ಜನಪ್ರಿಯತೆ ಪಡೆಯಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. 

Related Video