
Rashmika Mandanna: ಲವ್, ಮದುವೆ ಬಗ್ಗೆ ಕೊಡಗಿನ ಚೆಲುವೆಯ ಮನದ ಮಾತು!
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇರುವ ನಟಿ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮದುವೆ (Marriage) ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ (Interview) ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮದುವೆ ಆಗಲು ನಾನಿನ್ನೂ ಚಿಕ್ಕವಳು. ಮದುವೆ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ಯಾರೇ ಆಗಲಿ ತಮಗೆ ಕಂಫರ್ಟಬಲ್ ಎನಿಸುವವರ ಜೊತೆ ಇರಬೇಕು ಎಂದು ರಶ್ಮಿಕಾ ಹೇಳಿದ್ದಾರೆ. ಮಾತ್ರವಲ್ಲದೇ ಲವ್ (Love) ಎಂದರೆ ಪರಸ್ಪರ ಟೈಮ್, ಗೌರವ ಕೊಡುವುದು. ಒಬ್ಬರ ಜತೆ ಸುರಕ್ಷಿತ ಭಾವ ಮೂಡುವುದೇ ಲವ್ ಆಗಿದೆ.
ಸೀರೆ ಮೇಲೂ ನ್ಯಾಷನಲ್ ಕ್ರಶ್ Rashmika Mandanna, ಈ ಸೀರೆಗಳಿಗೆ ಸಖತ್ ಡಿಮ್ಯಾಂಡ್
ಇದು ಭಾವನೆಗಳಿಗೆ ಸಂಬಂಧಿಸಿದ ವಿಷಯವಾದ್ದರಿಂದ ವಿವರಿಸುವುದು ಕಷ್ಟ. ಇಬ್ಬರ ಕಡೆಯಿಂದಲೂ ಸರಿ ಇದ್ದಾಗ ಮಾತ್ರ ಪ್ರೀತಿ ಫಲಿಸುತ್ತದೆ. ಇದು ಒಬ್ಬರ ಕಡೆಯಿಂದ ಸಾಧ್ಯವಿಲ್ಲ ಎಂದು ರಶ್ಮಿಕಾ ತಿಳಿಸಿದ್ದಾರೆ. ರಕ್ಷಿತ್ ಶೆಟ್ಟಿ (Rakshit Shetty) ಮತ್ತು ರಶ್ಮಿಕಾ ಮಂದಣ್ಣ ನಡುವಿನ ನಿಶ್ಚಿತಾರ್ಥ ಬಹಳ ಹಿಂದೆಯೇ ಮುರಿದುಬಿದಿದ್ದು, ಸದ್ಯ ಅವರು ತೆಲುಗು ನಟ ವಿಜಯ್ ದೇವರಕೊಂಡ (Vijay Devarakonda) ಜತೆ ಆಪ್ತವಾಗಿದ್ದಾರೆ. ಇನ್ನು ರಶ್ಮಿಕಾ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ಬಾಲಿವುಡ್‌ನಲ್ಲಿ 'ಮಿಷನ್ ಮಜ್ನು', 'ಗುಡ್ ಬೈ' ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ತೆಲುಗಿನ 'ಪುಷ್ಪ 2' ಚಿತ್ರದ ಚಿತ್ರೀಕರಣದಲ್ಲಿ ತೊಡಗಬೇಕಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment