
ಗೆಳೆಯರ ಆಯ್ಕೆಯ ಬಗ್ಗೆ ಎಚ್ಚರದಿಂದಿರಿ, ಏನಿದು ರಶ್ಮಿಕಾ ಮಂದಣ್ಣ ಗೂಡಾರ್ಥ?
ರಶ್ಮಿಕಾ ಮಂದಣ್ಣ ಗೆಳೆಯರ ಆಯ್ಕೆ ಬಗ್ಗೆ ಸಲಹೆ ನೀಡಿದ್ದಾರೆ. ತಂದೆತಾಯಿಯರ ಮಾತು ಕೇಳಿ, ಅವರನ್ನು ನಂಬಿ ಎಂದು ಹೇಳಿದ್ದಾರೆ. ಈ ಪೋಸ್ಟ್ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸ್ಯಾಂಡಲ್ವುಡ್ನ ಕಿರಿಕ್ ಪಾರ್ಟಿ ಸಿನಿಮಾದಿಂದ ಬಣ್ಣದ ಲೋಕಕ್ಕೆ ಬಂದ ಚೆಲುವೆ ಇವತ್ತು ಇಂಡಿಯನ್ ಸಿನಿಇಂಡಸ್ಟ್ರಿಯ ಟಾಪ್ ನಟಿಮಣಿ. ವೃತ್ತಿ ಬದುಕಲ್ಲಿ ಎಷ್ಟೇ ಎತ್ತರಕ್ಕೆ ಹೋದ್ರೂ ರಶ್ಮಿಕಾ ಪರ್ಸನಲ್ ಲೈಫ್ನಲ್ಲಿ ಹಲವು ಏರು ಪೇರು ಎದುರಾದವು. ಆದ್ರೆ ರಶ್ಮಿಕಾ ಯಾವತ್ತೂ ಕುಗ್ಗಿಲ್ಲ. ಸದಾ ಉತ್ಸಾಹದ ಚಿಲುಮೆಯಂತೆ ಮುನ್ನುಗ್ತಾನೆ ಇರ್ತಾರೆ ಈ ಕೂರ್ಗ್ ಬ್ಯೂಟಿ. ಆದ್ರೆ ಇತ್ತೀಚಿಗೆ ರಶ್ಮಿಕಾ ಹಾಕಿದ ಒಂದು ಪೋಸ್ಟ್ ಪರ್ಸನಲ್ ಲೈಫ್ ಬಗ್ಗೆ ನಾನಾ ಪ್ರಶ್ನೆಗಳನ್ನ ಹುಟ್ಟಿಹಾಕಿದೆ.
ಇವತ್ತಿನ ನಿಮ್ಮ ಫ್ರೆಂಡ್ಸ್ ನಾಳೆ ನಿಮ್ಮವರಾಗಿರಲ್ಲ. ಹಾಗಾಗಿ ಯಾರನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದು ತುಂಬಾ ಮುಖ್ಯ. ನಿಮ್ಮ ತಂದೆ ತಾಯಿಯನ್ನ ಗೌರವಿಸಿ. ಜಗತ್ತಿನಲ್ಲಿ ಯಾರು ಪ್ರೀತಿ ಮಾಡದಷ್ಟು ಅವರು ನಿಮ್ಮನ್ನು ಪ್ರೀತಿ ಮಾಡ್ತಾರೆ. ಅವರ ಮಾತು ಕೇಳಿ ಮತ್ತು ಅವರನ್ನ ನಂಬಿ. ಅಪ್ಪ, ಅಮ್ಮನನ್ನ ಟೇಕನ್ ಫಾರ್ ಗ್ರಾಂಟೆಡ್ ಆಗಿ ತಗೋಬೇಡಿ
ಹೌದು ಇವತ್ತಿನ ಹುಡುಗ-ಹುಡುಗಿರು ಗೆಳೆಯರ ಆಯ್ಕೆಯಲ್ಲಿ ತುಂಬಾ ಎಚ್ಚರ ವಹಿಸಿ ಅನ್ನೋ ಮಾತುಗಳನ್ನ ಹೇಳಿದ್ದಾರೆ ರಶ್ಮಿಕಾ. ನಿನ್ನೆ ನಿಮ್ಮ ಗೆಳೆಯರಾಗಿದ್ದವರು ನಾಳೆ ಗೆಳೆಯರಾಗಿ ಇರ್ತಾರೋ ಇಲ್ಲವೋ ಗೊತ್ತಿಲ್ಲ. ಅವರು ಕೆಟ್ಟವರು ಅಂತ ಅಲ್ಲ, ಆದ್ರೆ ನಿಮ್ಮ ಪಾಲಿಗೆ ಅವರು ಕೆಟ್ಟವರಾಗಬಹುದು. ಸೋ ನಿಮ್ಮ ಆಯ್ಕೆ ನೆಟ್ಟಗಿರಲಿ ಅಂದಿದ್ದಾರೆ ರಶ್.
ಇನ್ನೂ ವಿಜಯ್ ದೇವರಕೊಂಡ ಜೊತೆಗಿನ ಅಫೇರು. ಇಬ್ಬರ ಓಡಾಟ ಸದ್ದು ಮಾಡ್ತಾನೇ ಇರುತ್ವೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗ್ತಾರೆ ಅನ್ನೋ ಸುದ್ದಿ ಕೂಡ ಇದೆ. ಇದೆಲ್ಲರ ನಡುವೆ ರಶ್ಮಿಕಾ ಹಾಕಿರೋ ಈ ಪೋಸ್ಟು ಸಹಜವಾಗೇ ಕುತೂಹಲ ಮೂಡುವಂತೆ ಮಾಡಿದೆ.
ರಶ್ಮಿಕಾ ಗೆಳೆಯರ ಆಯ್ಕೆ ಬಗ್ಗೆ ಯಾಕ್ ಮಾತನಾಡಿದ್ರು. ಯಾವ ಗೆಳಯ-ಗೆಳತಿ ರಶ್ಮಿಕಾ ಮನಸ್ಸಿಗೆ ಘಾಸಿ ಮಾಡಿದ್ರು ಅಂತ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ರಶ್ಮಿಕಾ ಖಾಸಗಿ ಜೀವನದಲ್ಲಿ ಮತ್ತೇನಾದ್ರೂ ಬೆಳವಣಿಗೆ ಆಯ್ತಾ ಅಂತ ಯೋಚನೆ ಮಾಡ್ತಾ ಇದ್ದಾರೆ. ಅದ್ರೆ ನಿಜಕ್ಕೂ ಏನ್ ಕಿರಿಕ್ ಆಗಿದೆ ಅನ್ನೋದನ್ನ ಖುದ್ದು ಕಿರಿಕ್ ಬ್ಯೂಟಿನೇ ಹೇಳಬೇಕು.