'ತೀರ್ಥರೂಪ ತಂದೆಯವರಿಗೆ' ಚಿತ್ರಕ್ಕೆ ನಿಹಾರ್ ಜೋಡಿಯಾಗಿ ರಚನಾ ಇಂದರ್!

'ಹೊಂದಿಸಿ ಬರೆಯಿರಿ' ಅನ್ನೋ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಈಗ 'ತೀರ್ಥರೂಪ ತಂದೆಯವರಿಗೆ' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ನಟಿ ರಚನಾ ಇಂದರ್ ಆಯ್ಕೆ ಆಗಿದ್ದಾರೆ. ಈಗಾಗಲೇ ಹಿರಿಯ ನಟಿ ಸಿತಾರಾ, ರಾಜೇಶ್ ನಟರಂಗ..

First Published Jan 9, 2025, 7:07 PM IST | Last Updated Jan 9, 2025, 7:07 PM IST

'ಹೊಂದಿಸಿ ಬರೆಯಿರಿ' ಅನ್ನೋ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಈಗ 'ತೀರ್ಥರೂಪ ತಂದೆಯವರಿಗೆ' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ನಟಿ ರಚನಾ ಇಂದರ್ ಆಯ್ಕೆ ಆಗಿದ್ದಾರೆ. ಈಗಾಗಲೇ ಹಿರಿಯ ನಟಿ ಸಿತಾರಾ, ರಾಜೇಶ್ ನಟರಂಗ ಚಿತ್ರತಂಡ ಸೇರಿಕೊಂಡಿದ್ದಾರೆ. ನಾಯಕ ನಿಹಾರ್ ಮುಖೇಶ್ ಜೋಡಿಯಾಗಿ ಈಗ ರಚನಾ ಇಂದರ್ ಅಭಿನಯಿಸುತ್ತಿದ್ದಾರೆ. 

ಹೊಂದಿಸಿ ಬರೆಯಿರಿ ಚಿತ್ರವು ಸಿನಿಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಅದೇ ನಿರ್ದೇಶಕರು ತೀರ್ಥರೂಪ ತಂದೆಯವರಿಗೆ ಸಿನಿಮಾ ಮಾಡುತ್ತಿರುವ ಕಾರಣಕ್ಕೆ ಸಾಕಷ್ಟು ಕುತೂಹಲ ಮೂಡಿದೆ. ನಾಯಕನಟ ನಿಹಾರ್ ಮುಖೇಶ್ ಅವರು ತೆಲುಗು ಸೀರಿಯಲ್‌ನಲ್ಲಿ ಕೂಡ ನಟಿಸುತ್ತಿದ್ದಾರೆ.

Video Top Stories