ಪುಷ್ಪ-2 ಸಕ್ಸಸ್ ಬೆನ್ನಲ್ಲೇ ದುರಂತಗಳ ಸರಮಾಲೆ; ಅಲ್ಲು ಅರ್ಜುನ್ ಮೇಲೆ ದಾಖಲಾಯ್ತು FIR
ಬಾಕ್ಸಾಫೀಸ್ನಲ್ಲಿ ಅಲ್ಲು ಅರ್ಜುನ್ಗೆ ಹೂ ಮಾಲೆ. ಪುಷ್ಪ-2 ನೋಡುವ ಆತುರ, ಬದುಕು ಮುಗಿಸಿದ ಯುವಕ. ಹೈದರಾಬಾದ್ ಫ್ಯಾನ್ಸ್ ಶೋನಲ್ಲಿ ಜೀವ ಬಿಟ್ಟ ಮಹಿಳೆ.
ಭಾರತೀಯ ಚಿತ್ರರಂಗದ ಬಾಕ್ಸಾಫೀಸ್ನಲ್ಲಿ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಧಗಧಗಿಸುತ್ತಿದ್ದಾರೆ. ಪುಷ್ಪ2 ಗಲ್ಲಾಪೆಟ್ಟಿಗೆಯಲ್ಲಿ ಐತಿಹಾಸಿಕ ರೆಕಾರ್ಡ್ ಬರೆಯುತ್ತಿದೆ. ಆದ್ರೆ ಪುಷ್ಪ ರಿಲೀಸ್ ಆಗುತ್ತಿದ್ದಂತೆ ದುರಂತಗಳಲ್ಲೂ ಎಂದೂ ಅಳಿಸಲಾಗದ ಹಿಸ್ಟರಿ ಸೃಷ್ಟಿಸಿದೆ. ಪುಷ್ಪ2 ಸಿನಿಮಾ ನೋಡೋಕೆ ಹೋಗಿ ಸತ್ತವರ ಲೀಸ್ಟ್ ದೊಡ್ಡದಿದೆ. ವಿಪರ್ಯಾಸ ಅಂದ್ರೆ ಮೊದಲು ಈ ದುರಂತ ನಡೆದದ್ದು ಕರ್ನಾಟಕದಲ್ಲೇ. ನಿನ್ನೆ ಪುಷ್ಪ2 ಸಿನಿಮಾ ನೋಡೋಕೆ ಆತುರಾತುರವಾಗಿ ಹೋಗುತ್ತುದ್ದ ಆಂಧ್ರ ಮೂಲದ 19 ವರ್ಷದ ಯುವಕ ಪ್ರವೀಣ್ ಎಂಬಾತ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ರೈಲ್ವೇ ಸೇತುವೆ ಬಳಿ ರೈಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆ.