ಪುನೀತ್ ರಾಜಕುಮಾರ್ ಜನ್ಮದಿನ: ನಟ ರಾಘವೇಂದ್ರ ರಾಜ್‌ಕುಮಾರ್ ಭಾವುಕ ನುಡಿ

ನಾಡಿನಾದ್ಯಂತ ಎಲ್ಲರೂ ಪುನೀತ್ ರಾಜ್‌ಕುಮಾರ್ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿನ  ಅಪ್ಪು ಸಮಾಧಿಗೆ ಭೇಟಿ ನೀಡಿ ಅಭಿಮಾನಿಗಳು ದರ್ಶನ ಪಡೆದುಕೊಳ್ಳುತ್ತಿದ್ದಾರೆ. 
 

Share this Video
  • FB
  • Linkdin
  • Whatsapp

ನಾಡಿನಾದ್ಯಂತ ಪುನೀತ್ ರಾಜ್‌ಕುಮಾರ್ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ಅಪ್ಪು ಸಮಾಧಿಗೆ ಭೇಟಿ ನೀಡಿ ಸಹಸ್ರಾರು ಅಭಿಮಾನಿಗಳು ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಅಪ್ಪು ನಮಗಿನ್ನು ಮಗುನೇ. ಇವತ್ತು ಬಂದಿರೋ ಅಭಿಮಾನಿಗಳಿಂದ ಅಪ್ಪು ಇನ್ನು ಬದುಕಿದ್ದಾನೆ ಅನ್ನೋದನ್ನ ತೋರಿಸುತ್ತೆ. ಜನ ಅಪ್ಪುನ ಜೀವಂತವಾಗಿಟ್ಟುಕೊಂಡಿದ್ದಾರೆ. ಅಪ್ಪು ಇನ್ನು 2 ವರ್ಷದ ಮಗು ಜನ ಬೆಳೆಸಿ ಆಟ ಆಡಿಸ್ತಿದ್ದಾರೆ. ಅಪ್ಪು ಇಲ್ಲ ಅಂದುಕೊಳ್ಳುವುದಾ ಅಥವಾ ಜನರಲ್ಲೇ ಇದಾರೆ ಅಂದುಕೊಳ್ಳುವುದಾ. ಜನರ ಪ್ರೀತಿ ವಿಶ್ವಾಸಕ್ಕೆ ಏನು ಹೇಳಲಾರೆ. ಸಾಷ್ಟಾಂಗ ನಮಸ್ಕಾರ ಹಾಕೋದೊಂದು ಬಿಟ್ರೆ ಇನ್ನೇನು ಹೇಳಲಾರೆ. ಅಪ್ಪು ಆದರ್ಶದ ದಂತೆ ಮುನ್ನಡೆದು ಸಾಗೋಣ ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ.

Related Video