ಅಪ್ಪು ಹುಟ್ಟುಹಬ್ಬ: ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಿಲಿಕಾನ್ ಸ್ಟ್ಯಾಚು

 ಪುನೀತ್ ರಾಜ್‍ಕುಮಾರ್ ಅವರ 49ನೇ ಹುಟ್ಟುಹಬ್ಬ ಅಂಗವಾಗಿ ಬೆಂಗಳೂರಿನ ಅಭಿಮಾನಿ ಅಪ್ಪುವಿನ ನೆನಪಿಗಾಗಿ ಸಿಲಿಕಾನ್ ಸ್ಟ್ಯಾಚು ಮಾಡಿಸಿದ್ದಾರೆ. 

First Published Mar 17, 2023, 11:14 AM IST | Last Updated Mar 17, 2023, 11:14 AM IST

ಪುನೀತ್ ರಾಜ್ ಕುಮಾರ್  ಜನ್ಮದಿನದ ಅಂಗವಾಗಿ ಬೆಂಗಳೂರಿನ ಅಭಿಮಾನಿ ಅಪ್ಪುವಿನ ನೆನಪಿಗಾಗಿ ಸಿಲಿಕಾನ್ ಸ್ಟ್ಯಾಚು ಮಾಡಿಸಿದ್ದಾರೆ. ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯ ಉದ್ಯಮಿ ಅದ್ವಿಕ್ ಈ ಪ್ರತಿಮೆ ಮಾಡಿಸಿದ್ದು, ಕಲಾವಿದರಾದ ಶ್ರೀಧರ್ ಮೂರ್ತಿ ಈ ಸಿಲಿಕಾನ್ ಸ್ಟ್ಯಾಚು ಮಾಡಿದ್ದಾರೆ.. ಸುಮಾರು ಎಂಟು ತಿಂಗಳ ಪರಿಶ್ರಮದ ಫಲವಾಗಿ ಈ ಪ್ರತಿಮೆ ಮೂಡಿ ಬಂದಿದ್ದು, ಅಭಿಮಾನಿಗಳನ್ನು ಸೆಳೆಯುತ್ತಿದೆ.ಸ್ಟ್ಯಾಚು ನೋಡಿದರೆ  ಅಪ್ಪು ಸೋಫಾದಲ್ಲಿ ಕುಳಿತಿದ್ದಾರೇನೋ ಅನ್ನುವಂತೆ ಭಾಸವಾಗುತ್ತದೆ.  ಅಪ್ಪು ನಗು, ಕಣ್ಣುಗಳು ಎಲ್ಲರನ್ನು ಮಂತ್ರಮುಗ್ಧ ಗೊಳಿಸುವಂತಿದೆ.. ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನ ಅಂಗವಾಗಿ ಕಂಠೀರವ ಸ್ಟೂಡಿಯೋದ ಅಪ್ಪು ಸಮಾಧಿಯ ಪಕ್ಕದಲ್ಲೆ ಈ ಸ್ಟ್ಯಾಚು ಇರಿಸಲಾಗಿದೆ.. ಸಮಾಧಿಯ ದರ್ಶನಕ್ಕೆ ಹೋಗುವ ಅಭಿಮಾನಿ ದೇವರುಗಳಿಗೆ ಪವರ್ ಸ್ಟಾರ್ ದರ್ಶನವು ಸಿಗಲಿದೆ..‌