ನಾಳೆ ಮಾರ್ಟಿನ್ ಟೀಸರ್ ರಿಲೀಸ್: ಚಿತ್ರಮಂದಿರ ಹೌಸ್ ಫುಲ್
ನಾಳೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದು, ಚಿತ್ರಮಂದಿರ ಎರಡು ದಿನದ ಮೊದಲೇ ಹೌಸ್ ಫುಲ್ ಆಗಿದೆ.
ನಾಳೆ ಬಹದ್ದೂರ್ ಹುಡುಗ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾದ ಟೀಸರ್ ರಿಲೀಸ್ ಆಗ್ತಿದೆ. ಟೀಸರ್ ರಿಲೀಸ್'ಗಾಗಿ ಬೆಂಗಳೂರಿನ ವೀರೇಶ್ ಚಿತ್ರಮಂದಿರ ಸಿದ್ಧವಾಗಿದೆ. ವಿಶೇಷ ಅಂದ್ರೆ ಫಸ್ಟ್ ದಿ ಫಸ್ಟ್ ಟೈಂ ಟೀಸರ್ ಪ್ರದರ್ಶನವನ್ನು ಪೈಯ್ಡ್ ಶೋ ಆಗಿ ಮಾಡುತ್ತಿದ್ದಾರೆ. ಟೀಸರ್ ಪ್ರದರ್ಶನಕ್ಕೆ ವೀರೇಶ್ ಚಿತ್ರಮಂದಿರ ಬುಕ್ ಮಾಡಿರೋ ಮಾರ್ಟಿನ್ ತಂಡ ಟೀಸರ್'ಗಾಗಿ ಎರಡು ಪೈಯ್ಡ್ ಶೋಗಳನ್ನ ಹಾಕಿದ್ದಾರೆ. ಮಾರ್ಟಿನ್ ಟೀಸರ್ ನೋಡೋಕೆ ಧ್ರುವ ಸರ್ಜಾ ಫ್ಯಾನ್ಸ್ ಟಿಕೆಟ್'ಗಳನ್ನು ಬುಕ್ ಮಾಡಿಕೊಂಡಿದ್ದು, ಎರಡು ಟೀಸರ್ ಶೋಗಳು ಹೌಸ್ ಫುಲ್ ಆಗಿವೆ.