
ರಶ್ಮಿಕಾ ಮಂದಣ್ಣಗೆ ಟಾರ್ಚರ್ ಕೊಟ್ರಾ 'ಪುಷ್ಪ' ಟೀಮ್? ಪಾಲಿಟಿಕ್ಸ್ ಕಾದಾಟದಲ್ಲಿ ಶ್ರೀವಲ್ಲಿ ಎಂಟ್ರಿ!
ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಒತ್ತಾಯಪೂರ್ವಕವಾಗಿ ನೃತ್ಯ ಮಾಡಿಸಲಾಗಿದೆ ಎಂದು ತೆಲಂಗಾಣ ರಾಜಕಾರಣಿ ಆರೋಪಿಸಿದ್ದಾರೆ. ರಶ್ಮಿಕಾ ಅವರೇ ಹಾಡಿನ ಚಿತ್ರೀಕರಣ ಕಷ್ಟಕರವಾಗಿತ್ತು ಎಂದು ಹೇಳಿಕೆ ನೀಡಿದ್ದರು ಎಂಬುದು ಆರೋಪದ ಆಧಾರ. ಈ ಹಾಡಿನಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಾದಕವಾಗಿ ನರ್ತಿಸಿದ್ದಾರೆ.
ಪುಷ್ಪ-2 ಸಿನಿಮಾ ರಿಲೀಸ್ ಸಮಯದಲ್ಲಾದ ಕಾಲ್ತುಳಿತ ಪ್ರಕರಣ ಅದೆಷ್ಟು ದೊಡ್ಡ ವಿವಾದ ಸೃಷ್ಟಿಸಿದೆ ಅನ್ನೋದು ಗೊತ್ತೇ ಇದೆ. ಈ ಕೇಸ್ನಲ್ಲಿ ಅಲ್ಲು ಅರ್ಜುನ್ ಬಂಧನ-ಬಿಡುಗಡೆಯೂ ಆಗಿದ್ದು, ವಿಚಾರಣೆ ಮುಂದುವರೀತಾ ಇದೆ. ಈ ನಡುವೆ ತೆಲಂಗಾಣ ರಾಜಕೀಯ ನಾಯಕರೊಬ್ರು ರಶ್ಮಿಕಾನ ಇದ್ರಲ್ಲಿ ಎಳೆದು ತಂದಿದ್ದಾರೆ. ಪುಷ್ಪ ಟೀಂ ರಶ್ಮಿಕಾಗೆ ಕಡುಕಾಟ ಕೊಟ್ಟಿದೆ ಎಂದಿದ್ದಾರೆ. ಭಾರತೀಯ ಕಮ್ಯುನಿಸ್ಟ್ ಪಕ್ಷದ ರಾಯಭಾರಿ ನಾರಾಯಣ್ ಪುಷ್ಪ ತಂಡ ವಿರುದ್ದ ಹರಿಹಾಯ್ದಿದ್ದಾರೆ. ಅದ್ರಲ್ಲೂ ಪೀಲಿಂಗ್ಸ್ ಸಾಂಗ್ನಲ್ಲಿ ರಶ್ಮಿಕಾಳಿಂದ ಒತ್ತಾಯಪೂರ್ವಕವಾಗಿ ಹೆಜ್ಜೆ ಹಾಕಿಸಿದ್ದಾರೆ ಅಂತ ಆರೋಪ ಮಾಡಿದ್ದಾರೆ.ಕಷ್ಟಕರವಾಗಿತ್ತು ಅಂತ ಖುದ್ದು ರಶ್ಮಿಕಾನೇ ಹೇಳಿದ್ರು. ಅದನ್ನೇ ಮುಂದಿಟ್ಟುಕೊಂಡು ಈ ರೀತಿ ಆರೋಪ ಮಾಡಲಾಗಿದೆ. ಅಸಲಿಗೆ ಈ ಶೃಂಗಾರ ಗೀತೆಯಲ್ಲಿ ಅಲ್ಲು ಅರ್ಜುನ್ ಆಂಡ್ ರಶ್ಮಿಕಾ ಮಾದಕವಾಗಿ ನರ್ತಿಸಿದ್ದಾರೆ. ರಶ್ಮಿಕಾ ಕೊಂಚ ಹೆಚ್ಚೇ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ.
Add Asianetnews Kannada as a Preferred Source
