Asianet Suvarna News Asianet Suvarna News

ಊಟ, ನಿದ್ದೆ ಇಲ್ಲದೆ ಇದ್ದರೂ ಪರವಾಗಿಲ್ಲ, ಮೇಕಪ್ ಇಲ್ಲದೆ ಪವಿತ್ರಾ ಗೌಡ ಇರಲ್ವಾ: ನೆಟ್ಟಿಗರು ಕಿಡಿ

ಊಟ, ನಿದ್ದೆ ಇಲ್ಲದೆ ಇದ್ದರೂ ಪರವಾಗಿಲ್ಲ, ಮೇಕಪ್ ಇಲ್ಲದೆ ಪವಿತ್ರಾ ಗೌಡ ಇರಲ್ವಾ ಅಂತ ನೆಟ್ಟಿಗರು ಈಗ ಕೇಳುತ್ತಿದ್ದಾರೆ. ಸಿಕ್ಕಾಪಟ್ಟೆ ಮೇಕಪ್ ಕ್ರೇಜ್ ಇದೆ ಎಂದು ಚರ್ಚಿಸುತ್ತಿದ್ದಾರೆ ನೆಟ್ಟಿಗರು. 

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟಿ ಪವಿತ್ರಾ ಗೌಡ ಆರೋಪಿ 1 ಆಗಿ ಜೈಲು ಸೇರಿದ್ದಾರೆ. ಆದರೆ ಇತ್ತೀಚೆಗೆ ಅವರ ಮೇಕಪ್ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಮಹಜರು ವೇಳೆ ಪವಿತ್ರಾಗೌಡ ಮೇಕಪ್ ಮಾಡಿಕೊಂಡ ವಿಚಾರ ಈಗ ಚರ್ಚೆಯಾಗುತ್ತಿದೆ. ಹಿರಿಯ ಅಧಿಕಾರಿಗಳು ಪವಿತ್ರಾ ಗೌಡಗೆ ಮೇಕಪ್ ಮಾಡೋಕೆ ಯಾಕೆ ಬಿಟ್ಟಿದ್ದೀರಿ ಎಂದು ಕಾರಣ ಕೇಳಿ ಪಿಎಸ್ ಐ ಗೆ ನೊಟೀಸ್ ನೀಡಿದ್ದರು. ಹಿರಿಯ ಅಧಿಕಾರಿಗಳ ನೋಟಿಸ್ ಗೆ ಉತ್ತರ ನೀಡಿರುವ ಪಿಎಸ್ ಐ ಗೀತಾ ವಾಶ್ ರೂಂ ಗೆ ಹೋಗಿದ್ದ ವೇಳೆ ಪವಿತ್ರಾಗೌಡ ಮೇಕಪ್ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಮಹಜರು ವೇಳೆ ವಾಶ್ ರೂಂಗೆ ಹೋಗ್ಬೇಕು ಎಂದು ಪವಿತ್ರಾ ಗೌಡ ಹೇಳಿದ್ದರು. 

ಅದಕ್ಕೆ ಆಯ್ತು ಅಂದಿದ್ದೆವು. ಅವರು ವಾಶ್ ರೂಂನಲ್ಲಿ ಮೇಕಪ್ ಐಟಂಗಳನ್ನು ಇಟ್ಟಿದ್ದು ಆಗ ಮೇಕಪ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದು ಬಿಟ್ಟರೆ ನಾವು ಮೇಕಪ್ ಮಾಡಿಕೊಳ್ಳಲು ಅಂತಾನೆ ಸಪರೇಟ್ ಆಗಿ ಪವಿತ್ರಾ ಗೌಡ ಅವರನ್ನು ಬಿಟ್ಟಿಲ್ಲ ಅಂತ ಪಿಎಸ್ಐ ಉತ್ತರ ಕೊಟ್ಟಿದ್ದಾರೆ. ಈ ರೀತಿಯಾಗಿ ಹಿರಿಯ ಅಧಿಕಾರಿಗಳು ಕೊಟ್ಟ ನೊಟೀಸ್ ಗೆ ಪಿಎಸ್ಐ ಗೀತಾ ಉತ್ತರ ನೀಡಿದ್ದಾರೆ. ರೇಣುಕಾಸ್ವಾಮಿ ಕೇಸ್ ನಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ ಹಾಗೂ ದರ್ಶನ್ ನ್ಯಾಯಾಲಯ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ದರ್ಶನ್ ಹಾಗೂ ಪವಿತ್ರಾ ಸೇರಿದಂತೆ ಇನ್ನು ಕೆಲ ಆರೋಪಿಗಳು ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿದ್ದಾರೆ.

ಜೂ.24ರಂದು ನಟ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ್ರು. ದರ್ಶನ್ ಮಗ ಬಂದು ಹೋದ ಬಳಿಕ ನಟಿ ಪವಿತ್ರಾ ಗೌಡ ಮಗಳಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗ್ತಿದೆ. ಅಮ್ಮನ ತರಾಟೆ ಬಳಿಕ ಇಂದು ಮಗಳು ತಾಯಿಯನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗ್ತಿದೆ. ಪವಿತ್ರಾ ಗೌಡ ಭೇಟಿ ಮಾಡಲು ಅವರ ಪೋಷಕರು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬೀಳಬಾರದು ಎಂದು ಪವಿತ್ರಾ ಮಗಳು ಹಾಗೂ ತಮ್ಮ ಮಾಸ್ಕ್ ಧರಿಸಿ ಬಂದಿದ್ರು. ಪವಿತ್ರಾ ತಾಯಿ ಮೊಮ್ಮಗಳ ಕೈ ಹಿಡಿದುಕೊಂಡು ಜೈಲಿನ ಒಳಗೆ ಹೋಗಿದ್ದಾರೆ. ಪೋಷಕರ ಜೊತೆ ಮಾತಾಡಿದ್ದ ಪವಿತ್ರಾ ಗೌಡ ಅಗತ್ಯ ವಸ್ತುಗಳ ಲಿಸ್ಟ್ ನೀಡಿದ್ದರಂತೆ. 

ಹೀಗಾಗಿ ಪೋಷಕರು ಒಂದು ಬ್ಯಾಗ್ ತುಂಬಾ ಬಟ್ಟೆ, ಮೇಕಪ್ ಕಿಟ್ ಸೇರಿದಂತೆ ಅನೇಕ ವಸ್ತುಗಳನ್ನು ತಂದಿದ್ರು ಎನ್ನಲಾಗ್ತಿದೆ. ಪೋಷಕರು ಜೈಲಿನ ಒಳಗೆ ಹೋದ ಬಳಿಕ ವಾಪಸ್ ಕಾರಿನ ಬಳಿ ಬಂದ ಪವಿತ್ರಾ ಗೌಡ ಸಹೋದರ ದೊಡ್ಡ ಬ್ಯಾಗ್ ತೆಗೆದುಕೊಂಡು ಮತ್ತೆ ಒಳಗೆ ಹೋಗಿದ್ದಾರೆ ಎನ್ನಲಾಗ್ತಿದೆ. ಊಟ, ನಿದ್ದೆ ಇಲ್ಲದೆ ಇದ್ದರೂ ಪರವಾಗಿಲ್ಲ, ಮೇಕಪ್ ಇಲ್ಲದೆ ಪವಿತ್ರಾ ಗೌಡ ಇರಲ್ವಾ ಅಂತ ನೆಟ್ಟಿಗರು ಈಗ ಕೇಳುತ್ತಿದ್ದಾರೆ. ಸಿಕ್ಕಾಪಟ್ಟೆ ಮೇಕಪ್ ಕ್ರೇಜ್ ಇದೆ ಎಂದು ಚರ್ಚಿಸುತ್ತಿದ್ದಾರೆ ನೆಟ್ಟಿಗರು. ಒಬ್ಬ ವ್ಯಕ್ತಿಯ ಜೀವ ಹೋಗಿದೆ, ಕೊಲೆ ಆರೋಪದಲ್ಲಿ ಜೈಲಿಗೆ ಹೋದರೂ ಮೇಕಪ್ ಚಿಂತೆ ಬಿಟ್ಟಿಲ್ಲ ಎಂದು ನೆಟ್ಟಿಗರು ಪವಿತ್ರಾ ಗೌಡ ಕಡೆಗೆ ಕಿಡಿ ಕಾರಿದ್ದಾರೆ.