
ಥೇಟ್ ಮಿಂಚಿನ ಓಟ ಸಿನಿಮಾ ಸ್ಟೈಲ್ನಲ್ಲಿ ಗ್ರೇಟ್ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್ ಬ್ರೇಕ್ ಪ್ರಕರಣ!
ಅವರೆಲ್ಲಾ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು ಜೈಲಿಗೆ ಬಂದಿದ್ರು. ಇನ್ನೂ ಚಿಕ್ಕ ವಯಸ್ಸು. ಆದ್ರೆ ಶಿಕ್ಷೆ ಪ್ರಮಾಣ ಇದ್ದಿದ್ದೆಲ್ಲಾ ದಶಕದ ಲೆಕ್ಕದಲ್ಲಿ. ಸೋ ಎಷ್ಟು ವರ್ಷ ಅಂತ ಜೈಲಲ್ಲೇ ಇರೋದು ಅಂತ ಒಂದು ದಿನ ಎಸ್ಕೇಪ್.
ಅವರೆಲ್ಲಾ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು ಜೈಲಿಗೆ ಬಂದಿದ್ರು. ಇನ್ನೂ ಚಿಕ್ಕ ವಯಸ್ಸು. ಆದ್ರೆ ಶಿಕ್ಷೆ ಪ್ರಮಾಣ ಇದ್ದಿದ್ದೆಲ್ಲಾ ದಶಕದ ಲೆಕ್ಕದಲ್ಲಿ. ಸೋ ಎಷ್ಟು ವರ್ಷ ಅಂತ ಜೈಲಲ್ಲೇ ಇರೋದು ಅಂತ ಒಂದು ದಿನ ಎಸ್ಕೇಪ್ ಪ್ಲಾನ್ ಮಾಡಿಯೇ ಬಿಟ್ಟರು. ಥೇಟ್ ಮಿಂಚಿನ ಓಟ ಸಿನಿಮಾ ಶೈಲಿಯ ಸ್ಕೆಚ್ ಅದು. ಅಂದುಕೊಂಡಂತೆ ಕಂಬಿಯನ್ನ ಕೊಯ್ದರು. ಕಾಂಪೌಂಡ್ ಕೂಡ ಹಾರಿದ್ರು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಎಸ್ಕೇಪ್ ಆದ್ರು. ಆದ್ರೆ ಅವರೆಲ್ಲಾ ಹೋಗಿದ್ದೆಲ್ಲಿಗೆ.? ಪೊಲೀಸರಿಗೆ ಅವರು ಸಿಕ್ಕಿದ್ರಾ.? ಇಡೀ ರಾಜ್ಯವನ್ನೇ ಬೆರಗು ಗಣ್ಣಿನಲ್ಲಿ ನೋಡುವಂತೆ ಮಾಡಿದ ಸಿನಿಮಾ ಶೈಲಿಯ ಪ್ರಿಸನ್ ಬ್ರೇಕ್ ಕಥೆಯೇ ಇವತ್ತಿನ ಎಫ್.ಐ.ಆರ್.
ಸೇಮ್ ಮಿಂಚಿನ ಓಟ ಸಿನಿಮಾ ಶೈಲಿಯಲ್ಲಿ ಎಸ್ಕೇಪ್ ಆದ್ರು.. ಆದ್ರೆ ಇಲ್ಲಿ ಅನುಮಾನ ಮೂಡೋದು ಕಾಂಪೌಂಡ್ ಮೇಲಿನ ಕರೆಂಟ್ ವೈರ್ ಯಾಕೆ ಅವರು ಎಸ್ಕೇಪ್ ಆಗೋ ಟೈಂನಲ್ಲಿ ವರ್ಕ್ ಆಗಿಲ್ಲ ಅಂತ. ಬಟ್ ಹೇಗೋ ಮೂವರು ಎಸ್ಕೇಪ್ ಆದ್ರು. ನಂತರ ಏನೇನಾಯ್ತು.? ಪೊಲೀಸರ ಕೈಗೆ ಅವರು ಸಿಕ್ಕಿಬಿದ್ರಾ.? ಒಬ್ಬ ಮರ್ಡರ್ ಕೇಸ್ನಲ್ಲಿ ಜೈಲು ಸೇರಿದ್ರೆ ಇನ್ನಿಬ್ಬರು ಪೋಕ್ಸೋ ಕೇಸ್ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು. ಪಕ್ಕಾ ಪ್ಲಾನ್ ಮಾಡಿ ಜೈಲಿನಿಂದ ಎಸ್ಕೇಪ್ ಆದ್ರು. ಸಂತೋಷ್ ಮತ್ತು ಸಾಗರ್ ಒಂದೇ ಬಸ್ನಲ್ಲಿ ಬೀದರ್ ಕಡೆಗೆ ಹೋದ್ರೆ ಮಸ್ತಾನ್ ಮುಂಬೈ ಕಡೆ ಹೊರಟ.
ಆದ್ರೆ ಇತ್ತ ತನಿಖೆ ಆರಂಭಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಸಂತೋಷ್ನನ್ನ ಬಂಧಿಸಿದ್ರು. ಆದ್ರೆ ಸಾಗರ್ ಜಸ್ಟ್ ಮಿಸ್ ಆಗಿಬಿಟ್ಟಿದ್ದ. ಕೆಲವೇ ನಿಮಿಷಗಳ ಹಿಂದೆ ಸಾಗರ್ ಬಸ್ನಿಂದ ಇಳಿದು ಹೋಗಿದ್ದ. ಆದ್ರೆ ಸೋತೋಷನನ್ನ ಅರೆಸ್ಟ್ ಮಾಡುವ ವೇಳೆ ಆತ ತಪ್ಪಿಸಿಕೊಳ್ಳೋಕೆ ಯತ್ನಿಸಿದ. ಪರಿಣಾಮ ಮಿಂಚಿನ ಓಟದ ಕ್ಲೈಮ್ಯಾಕ್ಸ್ನಂತೆ ಆತನಿಗೆ ಪೊಲೀಸರು ಗುಂಡು ಹೊಡೆದರು. ರಾಜಕೀಯ ಏನೇ ಇರಲಿ. ಇವತ್ತು ಮೂವರು ಖೈದಿಗಳು ಎಸ್ಕೇಪ್ ಆಗಿರೋದು ಜೈಲಿನ ಸಿಬ್ಬಂದಿಗಳ ಮೇಲೆಯೇ ಅನುಮಾನ ಬರೋದಕ್ಕೆ ಕಾರಣವಾಗಿದೆ. ಸದ್ಯ ಸಂತೋಷ ಲಾಕ್ ಆಗಿದ್ದಾನೆ. ಇನ್ನಿಬ್ಬರ ಬೇಟೆ ಮುಂದುವರೆದಿದೆ. ನೋಡೋಣ ಅವರು ಇನ್ನೂ ಎಷ್ಟು ದಿನ ತಪ್ಪಿಸಿಕೊಂಡಿರುತ್ತಾರೆ.