ನನ್ನ ಸಾಧನೆಯ ಹಿಂದೆ ದೊಡ್ಡ ಪ್ರಭಾವ ಬೀರಿದವನು ರಕ್ಷಿತ್: ಸ್ನೇಹಿತನ ಬಗ್ಗೆ ರಿಷಬ್ ಮನದಾಳದ ಮಾತು

ಇಂಡಸ್ಟ್ರಿಯಲ್ಲಿ ತುಂಬಾ ಜನ ಫ್ರೆಂಡ್ಸ್ ಬಂದು ಹೋಗುತ್ತಿರುತ್ತಾರೆ‌‌. ಆದರೆ ಎಮೋಷನಲ್ ಹತ್ತಿರವಾದವರು ರಕ್ಷಿತ್‌ ಶೆಟ್ಟಿ ಎಂದು  ನಟ ರಿಷಬ್ ಶೆಟ್ಟಿ ಹೇಳಿದರು.

Share this Video
  • FB
  • Linkdin
  • Whatsapp

ರಕ್ಷಿತ್‌ ಶೆಟ್ಟಿ ಜೊತೆ ತುಘಲಕ್‌ ಸಿನಿಮಾ ರಿಲೀಸ್'ಗೆ ಬಂದಾಗ ರಕ್ಷಿತ್‌ ಏನು ಹಾಗೂ ಅವರ ವ್ಯಕ್ತಿತ್ವ ಏನೆಂದು ಗೊತ್ತಾಯಿತು ಎಂದು ರಿಷಬ್ ಶೆಟ್ಟಿ ತಿಳಿಸಿದರು‌. ಸಿನಿಮಾ ಪ್ಲಾಪ್‌ ಆಗುತ್ತೆ ಅಲ್ಲಿಂದ ಜೊತೆಯಾಗುತ್ತೇವೆ. ಸಿನಿಮಾ ಓಡಿಲ್ಲಾ ಎಂದು ಬೇಜಾರಲ್ಲಿ ಇದ್ದಾಗ ಇವನು ಒಬ್ಬ ನಿಜವಾದ ಟ್ಯಾಲೆಂಟ್‌ ಎಂದು ಅನಿಸಿತು. ಆದರೆ ನನ್ನ ಜರ್ನಿಯನ್ನೇ ಬೇರೆ ರೀತಿಯಲ್ಲಿ ತೆಗೆದುಕೊಂಡು ಹೋಗಲಿಕ್ಕೆ ದೊಡ್ಡ ಪ್ರಭಾವವನ್ನು ಬೀರಿದವನು ರಕ್ಷಿತ್‌. ನಾನು ಯೋಚನೆ ಮಾಡುವ ರೀತಿ ಫಿಲ್ಮ ಮೇಕಿಂಗ್‌ ಸ್ಟೈಲ್‌ ಆಗಿರಬಹುದು ಹಾಗೂ ಕಥೆ ತೆಗೆದುಕೊಂಡು ಬರುವಂತ ವಿಚಾರವಾಗಿರಬಹುದು, ಇವೆಲ್ಲಕ್ಕೂ ರಕ್ಷಿತ್‌ ಪ್ರಮುಖ ಪಾತ್ರವನ್ನು ವಹಿಸುತ್ತಾನೆ ಎಂದರು. ನನಗೆ ಏನೇ ಗೊಂದಲವಿದ್ದರೂ ರಕ್ಷಿತ್‌ ಬಳಿ ಕೇಳುತ್ತೇನೆ‌. ಇಡೀ ಕಾಂತಾರದಲ್ಲಿ ಬೆಸ್ಟ್‌ ಮೂಮೆಂಟ್‌ ಯಾವುದು ಎಂದು ಎಲ್ಲರೂ ಕೇಳುತ್ತಾ ಇದ್ದರು. ರಕ್ಷಿತ್‌ ಅವನ ಎಮೋಷನ್ ತೋರಿಸಿದ್ದೇ ದೊಡ್ಡ ಮೂಮೆಂಟ್‌ ಎಂದು ಹೇಳುತ್ತೆನೆ ಎಂದು ಹೇಳಿದರು.

ಹೊಸ ವರ್ಷಕ್ಕೆ ಗೊಂಬೆ ಸರ್ಪ್ರೈಸ್: 'ಸೂತ್ರಧಾರಿ' ಹಾಡಿಗೆ ಸೊಂಟ ಬಳುಕಿಸಿದ ನಿವೇದಿತಾ

Related Video