ನೇತಾಜಿ ದೇಶಭಕ್ತಿಯ ಬೀಜ ಬಿತ್ತಿದ್ರು: ರೂಪಾ ಅಯ್ಯರ್

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಒಂದು ಭಾಷಣ ಮಾಡಿದ್ರೆ ಜನ ಪ್ರಚೋದನೆ ಆಗುತ್ತಿದ್ರು ಎಂದು ನಿರ್ದೇಶಕಿ ಕಮ್ ನಟಿ ರೂಪಾ ಅಯ್ಯರ್ ಹೇಳಿದರು.

Share this Video
  • FB
  • Linkdin
  • Whatsapp

ನೇತಾಜಿ ಅವರ ವ್ಯಕ್ತಿತ್ವ ಬಹಳ ದೊಡ್ಡದು, ಅವರು ದೇಶಭಕ್ತಿಯ ಬೀಜ ಬಿತ್ತಿದ್ರು ಎಂದು ರೂಪಾ ಅಯ್ಯರ್ ತಿಳಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ 126 ಜನ್ಮದಿನಾಚರಣೆ ಹಿನ್ನೆಲೆ, ನೀರಾ ಆರ್ಯ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೊದಲ ಮಹಿಳಾ ಆರ್ಮಿ ಕಟ್ಟಿದವರು ನೇತಾಜಿ. ನೀರ ಆರ್ಯ ಸುಭಾಷ್ ಚಂದ್ರ ಬೋಸ್ ಅವರನ್ನ ಉಳಿಸಿಕೊಳ್ಳಲು ತನ್ನ ಗಂಡನನ್ನೇ ಕೊಂದ ಮಹಿಳೆ ಎಂದರು. ನೀರ ಆರ್ಯಗೆ ಸರ್ಕಾರ ಯಾವುದೇ ಗೌರವ ಕೊಟ್ಟಿಲ್ಲ, ಅವರ ಆತ್ಮಕಥೆಯನ್ನೂ ಹೊರ ತರಲು ಬಿಡಲಿಲ್ಲ. ಅಂತಹ ಸಿನಿಮಾವನ್ನು ಮಾಡುತ್ತಿದ್ದೇನೆ ಎಂದರು.


Related Video