'ಛಾವಾ'ನಲ್ಲಿ ರಾಣಿಜೇನು ರಶ್ಮಿಕಾ; ಈ ಪಾತ್ರ ಸಿಕ್ಕಿದ್ದಕ್ಕೆ ಹೀಗೆ ಹೇಳಿದ್ರು ನ್ಯಾಷನಲ್ ಕ್ರಶ್!

ಸದ್ಯ ಛಾವಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಟ್ರೆಂಡಿಂಗ್​ನಲ್ಲಿದೆ. ಫೆಬ್ರುವರಿ 14ಕ್ಕೆ ಛಾವಾ ಮೂವಿ ವರ್ಲ್ಡ್ ವೈಡ್  ತೆರೆಗೆ ಬರಲಿದೆ. ಸದ್ಯ ಕಾಲುನೋವಿನಿಂದ ವಿಶ್ರಾಂತಿ ಪಡೀತಿರೋ ಇರೋ ರಶ್ಮಿಕಾ ಸದ್ಯದಲ್ಲೇ ಛಾವಾ ಪ್ರಮೋಷನ್​ಗೆ ಹಾಜರಾಗಲಿದ್ದಾರೆ...

Share this Video
  • FB
  • Linkdin
  • Whatsapp

ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಅಕ್ಷರಶಃ ಅದೃಷ್ಟದ ಲಾಟರಿಯೇ ಹೊಡೆದಿದೆ. ಪುಷ್ಪ-2 ಅಮೋಘ ಸಕ್ಸಸ್ ಬೆನ್ನಲ್ಲೇ ರಶ್ಮಿಕಾ ನಟಿಸಿರೋ ಹಿಸ್ಟಾರಿಕಲ್ ಮೂವಿ ಛಾವಾ ರಿಲೀಸ್​ಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ರಾಣಿ ಯೇಸುಬಾಯಿ ಆಗಿ ರಶ್ಮಿಕಾ ಮಿಂಚಿದ್ದು, ಈ ಲುಕ್ ನೋಡಿ ನ್ಯಾಷನಲ್ ಮೇಲೆ ಮತ್ತೊಮ್ಮೆ ಫ್ಯಾನ್ಸ್​ಗೆ ಕ್ರಶ್ ಆಗಿದೆ.

ಯೆಸ್ ಕೊಡಗಿನ ಕುವರಿ, ಕಿರಿಕ್ ಬ್ಯೂಟಿ ಈಗ ಸಕ್ಸಸ್ ಅಲೆಯಲ್ಲಿ ತೇಲ್ತಾ ಇದ್ದಾಳೆ. ಪುಷ್ಪ-2 ಸಿನಿಮಾದ ಹಿಸ್ಟಾರಿಕಲ್ ಯಶಸ್ಸು ಶ್ರೀವಲ್ಲಿಯನ್ನ ಆಗಸದಲ್ಲಿ ತೇಲುವಂತೆ ಮಾಡಿದೆ. ಇದರ ಬೆನ್ನಲ್ಲೇ ರಶ್ಮಿಕಾ ನಟಿಸಿರೋ ಹಿಸ್ಟಾರಿಕಲ್ ಮೂವಿ ಛಾವಾ ರಿಲೀಸ್​ಗೆ ಸಜ್ಜಾಗಿದೆ.

ಛಾವಾ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಆಧಾರಿತ ಕಥೆ. ವಿಕ್ಕಿ ಕೌಶಾಲ್ ಇಲ್ಲಿ ಸಂಭಾಜಿ ಮಹರಾಜ್ ಆಗಿ ನಟಿಸಿದ್ರೆ ರಶ್ಮಿಕಾ ರಾಣಿ ಯೇಸುಬಾಯಿ ಪಾತ್ರವನ್ನ ಮಾಡಿದ್ದಾರೆ. ಮಹಾರಾಣಿ ಅವತಾರದಲ್ಲಿ ರಶ್ಮಿಕಾ ಲುಕ್ ಸಖತ್ ಗ್ರ್ಯಾಂಡ್ ಆಗಿದೆ. ಇದನ್ನ ನೋಡಿದವರು ನಮ್ಮ ರಶ್ಮಿಕಾ ಅಪ್ಪಟ ರಾಣಿಜೇನು ಅಂತಿದ್ದಾರೆ.

ತನ್ನ ವೃತ್ತಿ ಬದುಕಲ್ಲಿ ಹಲವು ವಿಭಿನ್ನ ಪಾತ್ರಗಳನ್ನ ಮಾಡಿ ಗೆದ್ದಿರೋ ರಶ್ಮಿಕಾಗೆ ಇದು ಮೊದಲ ಐತಿಹಾಸಿಕ ಪಾತ್ರ. ಇಲ್ಲಿ ರಶ್ಮಿಕಾ ಡಿಫ್ರೆಂಟ್ ಅವತಾರ ನೋಡೋದಕ್ಕೆ ಸಿಗಲಿದೆ, ಅಷ್ಟೇ ಅಲ್ಲ ಪರ್ಫಾರ್ಮೆನ್ಸ್​​ಗೂ ಸಖತ್ ಸ್ಕೋಪ್ ಇರೋ ಪಾತ್ರ ಇದು. ಸೋ ಈ ಸಿನಿಮಾ ಮೂಲಕ ರಶ್ಮಿಕಾ ಮತ್ತೊಂದು ಲೆವೆಲ್​ಗೆ ಬೆಳೆಯೋದು ಫಿಕ್ಸ್ ಅಂತಿದಾರೆ ಸಿನಿ ಪಂಡಿತರು.

ಸದ್ಯ ಛಾವಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಟ್ರೆಂಡಿಂಗ್​ನಲ್ಲಿದೆ. ಫೆಬ್ರುವರಿ 14ಕ್ಕೆ ಛಾವಾ ಮೂವಿ ವರ್ಲ್ಡ್ ವೈಡ್ ತೆರೆಗೆ ಬರಲಿದೆ. ಸದ್ಯ ಕಾಲುನೋವಿನಿಂದ ವಿಶ್ರಾಂತಿ ಪಡೀತಿರೋ ಇರೋ ರಶ್ಮಿಕಾ ಸದ್ಯದಲ್ಲೇ ಛಾವಾ ಪ್ರಮೋಷನ್​ಗೆ ಹಾಜರಾಗಲಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

Related Video