Asianet Suvarna News

ನಟ ಸಂಚಾರಿ ವಿಜಯ್ ಬ್ರೈನ್ ಡೆಡ್; ಅಂಗಾಂಗ ದಾನದ ಬಳಿಕ ಕೊನೆಯುಸಿರು!

Jun 14, 2021, 11:01 PM IST

ಬೆಂಗಳೂರು(ಜೂ.14): ಬೈಕ್ ಅಪಘಾತದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರೀಯವಾಗಿದೆ ಅನ್ನೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಮೆದುಳು ಹೊರತು ಪಡಿಸಿದರೆ ಸಂಚಾರಿ ಆರೋಗ್ಯ ಸ್ಥಿರವಾಗಿದೆ, ಎಲ್ಲಾ ಅಂಗಾಂಗ ಕಾರ್ಯನಿರ್ವಹಿಸುತ್ತಿದೆ.  ಇಂದು ರಾತ್ರಿಯಿಂದ ಸಂಚಾರಿ ವಿಜಯ್ ಅಂಗಾಂಗ ದಾನ ನಡಯೆಲಿದೆ. ಈ ಪ್ರಕ್ರಿಯೆಯಲ್ಲಿ ಸಂಚಾರಿ ವಿಜಯ್ ಕೊನೆಯುಸಿರೆಳೆಯಲಿದ್ದಾರೆ. ಸಂಚಾರಿ ನಾಟಕಗಳಿಂದ ಜನಪ್ರಿಯರಾಗಿ, ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ಪ್ರತಿಭಾನ್ವಿತ ನಟನ ಅಂತಿಮ ಸಂಚಾರ ಅತ್ಯಂತ ನೋವಿನಿಂದ ಕೂಡಿದೆ.