ಉಪ್ಪಿ ಅಣ್ಣನ ಮಗನ ಚಿತ್ರ ರಿಲೀಸ್‌ಗೆ ರೆಡಿ; ಅದ್ದೂರಿ ಸೆಟ್ ನಲ್ಲಿ ಬ್ರಹ್ಮರಾಕ್ಷಸ ಸಾಂಗ್ ಶೂಟ್

ಉಪೇಂದ್ರ ಅವ್ರ ಸಹೋದರನ ಪುತ್ರ ನಿರಂಜನ್ ಅಭಿನಯದ ನಮ್ ಹುಡುಗರು ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದಲ್ಲಿ ನಿರಂಜನ್ ಜೊತೆ ವಸಿಷ್ಠ ಹಾಗೂ ಆಲ್ ಓಕೆ ಅಲೋಕ್  ಕೂಡ ವಿಶೇಷ ಪಾತ್ರದಲ್ಲಿ ಅಭಿನಯ ಮಾಡಿದ್ದು ಚಿತ್ರವನ್ನ ಸಿದ್ದು ನಿರ್ದೇಶನ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಉಪೇಂದ್ರ ಅವ್ರ ಸಹೋದರನ ಪುತ್ರ ನಿರಂಜನ್ ಅಭಿನಯದ ನಮ್ ಹುಡುಗರು (Nam Hudugaru) ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರದಲ್ಲಿ ನಿರಂಜನ್ ಜೊತೆ ವಸಿಷ್ಠ ಹಾಗೂ ಆಲ್ ಓಕೆ ಅಲೋಕ್ ಕೂಡ ವಿಶೇಷ ಪಾತ್ರದಲ್ಲಿ ಅಭಿನಯ ಮಾಡಿದ್ದು ಚಿತ್ರವನ್ನ ಸಿದ್ದು ನಿರ್ದೇಶನ ಮಾಡಿದ್ದಾರೆ. ಇನ್ನು ನಿರಂಜನ್ ಜೋಡಿಯಾಗಿ ರಾಧ್ಯಾ ರಂಗಾಯಣ ಕಾಣಿಸಿಕೊಂಡಿದ್ದಾರೆ. ಅಶ್ರಫ್ ಸಿನಿಮಾವನ್ನ ನಿರ್ಮಾಣ ಮಾಡಿದ್ದು , ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ. ಜುಲೈ 8ಕ್ಕೆ ಚಿತ್ರ ತೆರೆಗೆ ಬರ್ತಿದೆ. 

ಏಕಲವ್ಯ ಹಾಗೂ ಪಲ್ಲವಿ ಗೌಡ ಅಭಿನಯದ ಬ್ರಹ್ಮ ರಾಕ್ಷಸ ಸಿನಿಮಾದ ಹಾಡಿನ ಚಿತ್ರೀಕರಣ ಇತ್ತೀಚಿಗಷ್ಟೇ ನಡೆದಿದೆ. ಸಿನಿಮಾದ ಸಾಂಗ್ ಶೂಟ್ ಗಾಗಿ ಚಿತ್ರತಂಡ ಅದ್ದೂರಿಯಾಗಿ ಸೆಟ್ ಹಾಕಿ ಚಿತ್ರೀಕರಣ ಮಾಡಿದೆ...ಬ್ರಹ್ಮ ರಾಕ್ಷಸ ಸಿನಿಮಾವನ್ನ ಶಂಕರ್ ನಿರ್ದೇಶನ ಮಾಡ್ತಿದ್ದು ಜ್ಯೂತಿ ಆರ್ಟ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ...ಈ ಹಾಡಿಗೆ ನಾಗಣ್ಣ ನೃತ್ಯ ನಿರ್ದೇಶನ ಮಾಡಿದ್ದಾರೆ. 

Related Video