ಇಂದು ‘ಅಪ್ಪು’ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ : ಸಿದ್ಧತೆ ಕುರಿತು ಸಚಿವ ಆರ್. ಅಶೋಕ್ ಮಾಹಿತಿ

ಇಂದು ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಈ ಕುರಿತು ಸಚಿವ ಆರ್. ಅಶೋಕ್ ಸಂಪೂರ್ಣ ಮಾಹಿತಿ ನೀಡಿದ್ದಾರೆ.
 

Share this Video
  • FB
  • Linkdin
  • Whatsapp

ಇಂದು ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಇಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಸೌಧದ ಮುಂಭಾಗ ಸಕಲ ಸಿದ್ಧತೆ ನಡೆದಿದೆ. ಈ ಕುರಿತು ಸಚಿವ ಆರ್.‌ ಅಶೋಕ್ ಮಾತನಾಡಿ, ಬಹಳ ದೊಡ್ಡದಾದ ವೇದಿಕೆಯನ್ನು ಮಾಡಲಾಗಿದೆ. ಸುಮಾರು 30 ಜನ ವಿಐಪಿಗಳು ಕುಳಿತುಕೊಳ್ಳಲು ಅವಕಾಶ ಮಾಡಲಾಗಿದೆ ಎಂದರು. ಪುನೀತ್‌ ಕುಟುಂಬದ ಸುಮಾರು 50 ಜನ ಬರುತ್ತಿದ್ದು, ಅವರಿಗೆ ಪ್ರತ್ಯೆಕವಾಗಿ ಮುಂದುಗಡೆ ವ್ಯವಸ್ಥೆ ಮಾಡಲಾಗಿದೆ. ಸಿನಿರಂಗದವರಿಗೆ 100 ಸೀಟ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು. ಇನ್ನು ವಿಧಾನ ಸೌಧದ ಮುಂಭಾಗ ಹಂಪಿ ಮಾದರಿಯಲ್ಲಿ ಸೆಟ್ ಹಾಕಿದ್ದು,‌ 200ಕ್ಕೂ ಹೆಚ್ಚು ವಿವಿಐಪಿ, ವಿಐಪಿಗಳು ಭಾಗಿಯಾಗುವ ಸಾಧ್ಯತೆಯಿದೆ.

ನಟಿ ಸಮಂತಾಗೆ Myositis ಕಾಯಿಲೆ: ಗುಣಪಡಿಸೋಕೆ ಆಗಲ್ಲ, ಚಿಕಿತ್ಸೆಯಷ್ಟೇ ನೀಡ್ಬೋದು

Related Video