
Puneeth Rajkumar: ಪವರ್ ಸ್ಟಾರ್‌ಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ರೈತ!
ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿ ತಿಂಗಳುಗಳೇ ಕಳೆದಿದ್ದರೂ ಅವರ ನೆನಪುಗಳು ಮಾತ್ರ ಜನರ ಮನಸ್ಸಿಂದ ಮರೆಯಾಗದೆ ಹಾಗೆ ಉಳಿದಿವೆ. ಇದಕ್ಕೆ ಕಾರಣ ಅವರ ಮೇಲೆ ಅವರ ಅಭಿಮಾನಿಗಳಿಗೆ ಇದ್ದ ಅಪಾರ ಅಭಿಮಾನ. ಅದೇ ರೀತಿ ಮಂಡ್ಯದ ರೈತ ಅಭಿಮಾನಿ ಅಗಲಿದ ಪುನೀತ್‌ಗೆ ಶ್ರದ್ಧಾಂಜಲಿಯನ್ನು ವಿಭಿನ್ನವಾಗಿ ಸಲ್ಲಿಸಿದ್ದಾರೆ.
ಮಂಡ್ಯ (ಫೆ.06): ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ನಮ್ಮನ್ನು ಅಗಲಿ ತಿಂಗಳುಗಳೇ ಕಳೆದಿದ್ದರೂ ಅವರ ನೆನಪುಗಳು ಮಾತ್ರ ಜನರ ಮನಸ್ಸಿಂದ ಮರೆಯಾಗದೆ ಹಾಗೆ ಉಳಿದಿವೆ. ಇದಕ್ಕೆ ಕಾರಣ ಅವರ ಮೇಲೆ ಅವರ ಅಭಿಮಾನಿಗಳಿಗೆ ಇದ್ದ ಅಪಾರ ಅಭಿಮಾನ. ಅದೇ ರೀತಿ ಮಂಡ್ಯದ (Mandya) ರೈತ ಅಭಿಮಾನಿ (Farmer Fan) ಅಗಲಿದ ಪುನೀತ್‌ಗೆ ಶ್ರದ್ಧಾಂಜಲಿಯನ್ನು ವಿಭಿನ್ನವಾಗಿ ಸಲ್ಲಿಸಿದ್ದಾರೆ.
Puneeth Rajkumar Fans: ಅಪ್ಪು ಕೋಟ್ಯಾಧಿಪತಿಯಿಂದ ಸ್ಫೂರ್ತಿ ಪಡೆದು ಅಣ್ಣ -ತಂಗಿ ಸಾಧನೆ!
ಹೌದು! ನಟ ಪುನೀತ್ ರಾಜ್‍ಕುಮಾರ್ ನಿಧನರಾದ ಬಳಿಕ ಮಂಡ್ಯದ ಮೊತ್ತ ಹಳ್ಳಿ ಗ್ರಾಮದ ರಾಜಣ್ಣ ಭತ್ತದ ಪೈರಿನಲ್ಲಿ 'ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಅಪ್ಪು' ಎಂದು ತಮ್ಮ ಜಮೀನಿನಲ್ಲಿ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸುತ್ತ ಹಳ್ಳಿ ಜನರು ರಾಜಣ್ಣ ಜಮೀನಿನಲ್ಲಿ ಪುನೀತ್ ರಾಜ್‍ಕುಮಾರ್ ಹೆಸರು ಕಂಡು ಅವರ ಅಭಿಮಾನಕ್ಕೆ ಭೇಷ್ ಎಂದಿದ್ದಾರೆ. ಮಾತ್ರವಲ್ಲದೇ ಅಪ್ಪು ಅವರು ನಮ್ಮ ಗ್ರಾಮಕ್ಕೆ ಬರಬೇಕೆಂದು ಆಸೆ ಇತ್ತು. ಅದನ್ನ ನಮ್ಮ ಶಿವಣ್ಣ ಅವರು ನೇರವೇರಿಸಬೇಕು ಎಂದು ಗ್ರಾಮದ ಅಭಿಮಾನಿಗಳು ಆಸೆಯನ್ನು ವ್ಯಕ್ತಪಡಿಸಿದ್ದಾರೆ.