Asianet Suvarna News Asianet Suvarna News

ಹೆಡ್‌ಬುಷ್: ರೌಡಿ ಗಂಗನ ಪಾತ್ರಕ್ಕೆ ಯೋಗಿ ಒಪ್ಪಿದ್ದೇಕೆ ಗೊತ್ತಾ?

ಡಾಲಿ ಧನಂಜಯ್‌ ನಟನೆಯ ‘ಹೆಡ್‌ ಬುಷ್‌’ ಸಿನಿಮಾ ಅಕ್ಟೋಬರ್‌ 21ಕ್ಕೆ ಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಭೂಗತ ಲೋಕದ ಡಾನ್‌ ಜಯರಾಜ್‌ ಅವರ ಜೀವ ಆಧರಿತ ಕತೆ ಎಂದು ಹೇಳಲಾಗುತ್ತಿರುವ ಈ ಚಿತ್ರವಿದು. 

Oct 5, 2022, 2:21 PM IST

ಡಾಲಿ ಧನಂಜಯ್‌ ನಟನೆಯ ‘ಹೆಡ್‌ ಬುಷ್‌’ ಸಿನಿಮಾ ಅಕ್ಟೋಬರ್‌ 21ಕ್ಕೆ ಬಿಡುಗಡೆ ಆಗುತ್ತಿದೆ. ಬೆಂಗಳೂರಿನ ಭೂಗತ ಲೋಕದ ಡಾನ್‌ ಜಯರಾಜ್‌ ಅವರ ಜೀವ ಆಧರಿತ ಕತೆ ಎಂದು ಹೇಳಲಾಗುತ್ತಿರುವ ಈ ಚಿತ್ರವಿದು. ದೀಪಾವಳಿ ಹಬ್ಬಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ಅಗ್ನಿ ಶ್ರೀಧರ್‌ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಶೂನ್ಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿ ಪಾಯಲ್‌ ರಜಪೂತ್‌ ನಟಿಸಿದ್ದಾರೆ. ಡಾಲಿ ಧನಂಜಯ್‌ ಇಲ್ಲಿ ಜಯರಾಜ್‌ ಪಾತ್ರದಲ್ಲಿ ನಟಿಸುತ್ತಿದ್ದು, ಲೂಸ್ ಮಾದ ಯೋಗಿ ಗಂಗ ಅನ್ನೋ ರೌಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಯೋಗಿ ಈ ಪಾತ್ರವನ್ನು ಯಾಕೆ ಒಪ್ಪಿದರು ಎಂಬುದನ್ನು ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment