ಕಿಚ್ಚ ಸುದೀಪ್ ಮ್ಯಾಕ್ಸ್ ಖದರ್, ಗಲ್ಲಾಪೆಟ್ಟಿಗೆಯಲ್ಲಿ ಇವರದ್ದೇ ದರ್ಬಾರ್!
ಹೊಸ ವರ್ಷ ಕೂಡ ಚಂದನವನಕ್ಕೆ ಹೊಸ ಹುರುಪು ತಂದಿದೆ. ಕ್ರಿಸ್ಮಸ್ ಗೆ ಬಂದ 'ಯುಐ' ಹಾಗೂ 'ಮ್ಯಾಕ್ಸ್' ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಗೆದ್ದಿವೆ. ಅದರಲ್ಲೂ ಕಿಚ್ಚನ ದರ್ಬಾರ್ ಜೋರಾಗಿಯೇ ಇದೆ. ಸಿನಿರಸಿಕರು, ನಿರ್ಮಾಪಕರು, ವಿತರಕರು ಎಲ್ಲರೂ ಖುಷಿಯಾಗಿದ್ದಾರೆ...
ಸ್ಯಾಂಡಲ್ವುಡ್ನಲ್ಲಿ ಬಾಕ್ಸಾಫೀಸ್ ಸುಲ್ತಾನ್ ಯಾರು ಅನ್ನೋ ಚರ್ಚೆಯ ಹೀಟ್ ಹೆಚ್ಚಾಗಿದೆ. ಕಾಟೇರ ಸಿನಿಮಾದಲ್ಲಿ ದರ್ಶನ್ ಬಾಕ್ಸಾಫೀಸ್ ದೋಚಿದ್ದಕ್ಕೆ ದರ್ಶನ್ನೇ ಬಾಕ್ಸಾಫೀಸ್ ಸುಲ್ತಾನ್ ಅಂತ ಅವರ ಫ್ಯಾನ್ಸ್ ಬೀಗುತ್ತಾರೆ. ಆದ್ರೆ ಕಾಟೇರನನ್ನೂ ಮೀರಿಸೋ ಹೆಬ್ಬುಲಿ ಈಗ ಬಾಕ್ಸಾಫೀಸ್ ಸುಲ್ತಾನ್ ಆಗಿ ಘರ್ಜಿಸುತ್ತಿದೆ. ಹಾಗಾದ್ರೆ ಹೆಬ್ಬುಲಿ ಕಿಚ್ಚನ ಮ್ಯಾಕ್ಸ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಾಗಿದೆ..? 100 ಕೋಟಿ ಕ್ಲಬ್ ಸೇರಿದೆಯಾ ಮ್ಯಾಕ್ಸ್..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಆಗಿರೋ ಮ್ಯಾಕ್ಸ್ ಲೆಕ್ಕಾಚಾರ..
ನಟ ದರ್ಶನ್ ಕಾಟೇರ ಸಿನಿಮಾ ಬಾಕ್ಸಾಫೀಸ್ ದೋಚಿದ್ದು ಈಗ ಇತಿಹಾಸ. ಒಂದು ಕೊಲೆ ಕೇಸ್ ದರ್ಶನ್ ಗಿದ್ದ ನಟ ಅನ್ನೋ ಇಮೇಜ್ಗೆ ಮಸಿ ಬಳಿದಿದೆ. ತೆರೆ ಮೇಲೆ ಲಾಂಗ್ ಹಿಡಿದು ಕೊಚ್ಚುತ್ತಿದ್ದ ದರ್ಶನ್ಗೆ ರಿಯಲ್ ಲೈಫ್ನಲ್ಲಿ ಇದೆಲ್ಲಾ ಬೇಕಿತ್ತಾ ಅಂತ ಮನೆ ಮನೆಯೂ ಮಾತಾಡುತ್ತಿವೆ. ಆದ್ರೆ ಸ್ಯಾಂಡಲ್ವುಡ್ ಬಾಕ್ಸಾಫೀಸ್ಗೆ ಸುಲ್ತಾನ್ ನಟ ದರ್ಶನ್ ಬಿಟ್ರೆ ಮತ್ಯಾರು ಇಲ್ಲ ಅಂತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೀಗುತ್ತಿದ್ದ ಕೆಲವ್ರು ಈಗ ಆ ಕಪ್ಪು ಬಟ್ಟೆ ಬಿಚ್ಚಿದ್ದಾರೆ. ಯಾಕಂದ್ರೆ ಬಾಕ್ಸಾಫೀಸ್ಗೆ ಹೆಬ್ಬುಲಿ ಅನ್ನೋ ಸುಲ್ತಾನ್ ಘರ್ಜಿಸುತ್ತಿದೆ.
ಕಿಚ್ಚ.. ಬಾದ್ ಷಾ.. ಅಭಿನಯ ಚಕ್ರವರ್ತಿ.. ಇದು ಸುದೀಪ್ ಅಭಿಮಾನಿಗಳ ಪ್ರೀತಿಯ ಬಿರುದ್ದುಗಳು. ಅದಕ್ಕೆ ತಕ್ಕಂತೆ ನಟಿಸಿ ಮನೆ ಮನೆಯ ಪ್ರೇಕ್ಷಕರ ಮನಸ್ಸು ಗೆಲ್ಲೋ ಶಕ್ತಿ ಇರೋ ಕೆಲವೇ ಕನ್ನಡ ನಟರಲ್ಲಿ ಸುದೀಪ್ ಮೊದಲಿಗರು. ಸುದೀಪ್ ಈಗ ಬಾಕ್ಸಾಫೀಸ್ ಸುಲ್ತಾನ್ ಆಗಿದ್ದಾರೆ. ಕಿಚ್ಚನ ಮ್ಯಾಕ್ಸ್ ಖದರ್ಗೆ ಗಲ್ಲಾ ಪೆಟ್ಟಿಗೆ ವಿಜೃಂಭಿಸುತ್ತಿದೆ.
ಹೊಸ ವರ್ಷ ಕೂಡ ಚಂದನವನಕ್ಕೆ ಹೊಸ ಹುರುಪು ತಂದಿದೆ. ಕ್ರಿಸ್ಮಸ್ ಗೆ ಬಂದ 'ಯುಐ' ಹಾಗೂ 'ಮ್ಯಾಕ್ಸ್' ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಗೆದ್ದಿವೆ. ಅದರಲ್ಲೂ ಕಿಚ್ಚನ ದರ್ಬಾರ್ ಜೋರಾಗಿಯೇ ಇದೆ. ಸಿನಿರಸಿಕರು, ನಿರ್ಮಾಪಕರು, ವಿತರಕರು ಎಲ್ಲರೂ ಖುಷಿಯಾಗಿದ್ದಾರೆ. ಅಭಿನಯ ಚಕ್ರವರ್ತಿಯ ಮ್ಯಾಕ್ಸ್ ರಿಲೀಸ್ ಆಗಿ ಜೆಸ್ಟ್ 8 ದಿನಕ್ಕೆ 100 ಕೋಟಿ ಕ್ಲಬ್ ಸೇರೋ ಸನಿಹಕ್ಕೆ ಬಂದಿದೆ.
ಮ್ಯಾಕ್ಸ್ ನ ಅರ್ಜುನ್ ಮಹಾಕ್ಷಯ್ ಕಿಚ್ಚ ಫಸ್ಟ್ ಡೇ ಬಾಕ್ಸಾಫೀಸ್ನಲ್ಲಿ 12.5 ಕೋಟಿ ಕಲೆಕ್ಷನ್ ಮಾಡಿದ್ರು. ಆ ಹಬ್ಬದ ರಜೆ ಇದ್ದಿದ್ರಿಂದ ಈ ಸಿನಿಮಾವನ್ನ ಪ್ರೇಕ್ಷಕ ಥಿಯೇಟರ್ಗೆ ನುಗ್ಗಿ ನೋಡಿದ್ದಾರೆ. ಮ್ಯಾಕ್ಸ್ಗೆ ಸಿಕ್ಕಾ ಒಳ್ಳೆಯ ರೆಸ್ಪಾನ್ಸ್ ಈ ಸಿನಿಮಾವನ್ನ ಜೆಸ್ಟ್ 8 ದಿನದಲ್ಲಿ 70 ಕೋಟಿ ಗ್ರಾಸ್ ಕಲೆಕ್ಷನ್ಗೆ ತಂದು ನಿಲ್ಲಿಸಿದೆ. ಸಧ್ಯಕ್ಕೆ ಮ್ಯಾಕ್ಸ್ ಗ ಇರೋ ಬೇಡಿಕೆ ನೋಡಿದ್ರೆ ಕೆಲವೇ ದಿನದಲ್ಲಿ ಈ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡೋ ಸಾಧ್ಯತೆ ಇದೆ. ಈ ಮೂಲಕ ವರ್ಷದ ಆರಂಭದಲ್ಲೇ ಸ್ಯಾಂಡಲ್ವುಡ್ ದೊಡ್ಡ ಹಿಸ್ಟರಿ ಸೃಷ್ಟಿಸಲಿದೆ.