Asianet Suvarna News Asianet Suvarna News

ಕಿಚ್ಚನ ಎಕ್ಕ ಸಕ್ಕ ಕಿಕ್ಕು ಹೆಚ್ಚಿಸಿದ್ರು ಸ್ಯಾಂಡಲ್ವುಡ್ ಸ್ಟಾರ್ಸ್.!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಗ ಇಂಡಿಯಾದ ನಯಾ ಸೆನ್ಸೇಷನ್. ಕೆಜಿಎಫ್-3 ಸಿನಿಮಾ ನೋಡಿದವರೆಲ್ಲಾ ಈಗ ಕಾಯ್ತಿರೋದು ವಿಕ್ರಾಂತ್ ರೋಣನಿಗಾಗಿ. ವಿಕ್ರಾಂತ್ ರೋಣನ ಕಾಯುವಿಕೆಗೆ ಮತ್ತಷ್ಟು ತುಪ್ಪ ಸುರಿದಿರೋದು ಗಡಾಂಗ್ ರಕ್ಕಮ್ಮನ ಎಕ್ಕ ಸಕ್ಕ ಸಾಂಗು. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಈಗ ಇಂಡಿಯಾದ ನಯಾ ಸೆನ್ಸೇಷನ್. ಕೆಜಿಎಫ್-3 ಸಿನಿಮಾ ನೋಡಿದವರೆಲ್ಲಾ ಈಗ ಕಾಯ್ತಿರೋದು ವಿಕ್ರಾಂತ್ ರೋಣನಿಗಾಗಿ. ವಿಕ್ರಾಂತ್ ರೋಣನ (Vikrant Rona) ಕಾಯುವಿಕೆಗೆ ಮತ್ತಷ್ಟು ತುಪ್ಪ ಸುರಿದಿರೋದು ಗಡಾಂಗ್ ರಕ್ಕಮ್ಮನ ಎಕ್ಕ ಸಕ್ಕ ಸಾಂಗು. ಯಾವ್ ಮಟ್ಟಕ್ಕೆ ಅಂದ್ರೆ ಎಲ್ಲೆಲ್ಲೂ ಕಿಚ್ಚ-ಜಾಕ್ವೆಲಿನ್ರ ಈ ಹಾಡು ಗುಂಗು ಹಿಡಿದಿದ್ದು, ಸೋಷಿಯಲ್ ಸಮುದ್ರದಲ್ಲಿ ಭಾರಿ ಟ್ರೆಂಡ್ ಆಗ್ತಿದೆ. 

ಈಗೇನಿದ್ರು ರಾ.. ರಾ.. ರಕ್ಕಮ್ಮನದ್ದೇ ದರ್ಬಾರ್.. ಯಾರ್ ಬಾಯಲ್ಲಿ ಕೇಳಿ ರಾ ರಾ ರಕ್ಕಮ್ಮ.. ರಾ ರಾ ರಕ್ಕಮ್ಮ ಅಂತ ಗುನುಗುತಿರ್ತಾರೆ. ಆ ಮಟ್ಟಿಗೆ ವಿಕ್ರಾಂತ್ ರೋಣನ ರಕ್ಕಮ್ಮ ಸನ್ನಿ ಹಿಡಿಸಿದ್ದಾಳೆ. ಕಿಚ್ಚ ಸುದೀಪ್ ಹಾಗು ಶ್ರೀಲಂಕನ್ ಬ್ಯೂಟಿ ಜಾಕ್ವೆಲೀನ್ ಫರ್ನಾಂಡೀಸ್ ಸ್ಟೆಪ್ಸ್ ನೋಡಿ ಥ್ರಿಲ್ ಆಗಿರೋದಲ್ಲದೇ, ಈ ಹಾಡಿನ ಸ್ಟೆಪ್ಸ್ನ ಹಾಗೆ ಇದ್ದ ಬದ್ದವರೆಲ್ಲಾ ಎದ್ದು ನಿಂತು ಕುಣಿಯುತ್ತಿದ್ದಾರೆ. ಮತ್ತೊಂದ್ ಕಡೆ ಎಂದೂ ಯಾವ ಹಾಡಿಗೂ ಡಾನ್ಸ್ ಮಾಡದ ಸೆಲೆಬ್ರೆಟಿ ಸ್ಟಾರ್ಸ್ ಕೂಡ ಎಕ್ಕ ಸಕ್ಕ ಅಂತ ಕಿಚ್ಚ ಜಾಕ್ವೆಲಿನ್ ಡಾನ್ಸ್ ಅನ್ನ ರಿಮೇಕ್ ಮಾಡ್ತಿದ್ದಾರೆ.