ಎರಡೂವರೇ ವರ್ಷಗಳ ಬಳಿಕ ಕಿಚ್ಚನ ‘ಮ್ಯಾಕ್ಸ್’ ಮಾಸ್ ಎಂಟ್ರಿ! ಮಾಜಿ ಕುಚಿಕುಗೆ ಕೌಂಟರ್
ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾ ಬಗ್ಗೆ ಹೊಸ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಾಯಿಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ ಮತ್ತು ಮಾಜಿ ಕುಚಿಕು ದರ್ಶನ್ಗೆ ಕೌಂಟರ್ ಕೊಟ್ಟಿದ್ದಾರೆ. ಉಪ್ಪಿಯ UI ಜೊತೆಗಿನ ಕ್ಲ್ಯಾಶ್ ಬಗ್ಗೆಯೂ ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ಕ್ರಿಸ್ ಮಸ್ ದಿನ ಮ್ಯಾಕ್ಸ್ ಅವತಾರದಲ್ಲಿ ತೆರೆಗೆ ಬರೋಕೆ ಸಜ್ಜಾಗಿದ್ದಾರೆ. ಎರಡು ವರ್ಷದಿಂದ ಶ್ರಮಪಟ್ಟು ರೆಡಿಮಾಡಿರೋ ಮ್ಯಾಕ್ಸ್ ಮೂವಿ ಬಗ್ಗೆ ಇದೇ ಮೊದಲ ಬಾರಿಗೆ ಅಪರೂಪದ ಸಂಗತಿಗಳನ್ನ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಮ್ಮನ ನೆನಪುಗಳನ್ನ ಬಿಚ್ಚಿಟ್ಟಿದ್ದಾರೆ. ಮಾಜಿ ಕುಚಿಕು ದಾಸನಿಗೆ ಒಂಚೂರು ಕೌಂಟರ್ ಕೊಟ್ಟಿದ್ದಾರೆ. ಉಪ್ಪಿಯ UI ಜೊತೆಗಿನ ಕ್ಲ್ಯಾಶ್ ಬಗ್ಗೆ ಮಾತನಾಡಿದ್ದಾರೆ.
ಸುದೀಪ್ ಈ ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಮೊದಲು ನೆನಪಿಸಿಕೊಂಡಿದ್ದೇ, ಇತ್ತೀಚಿಗೆ ಅಗಲಿದ ತಾಯಿಯನ್ನ. ಕಳೆದ ಅಕ್ಟೋಬರ್ ತಿಂಗಳಲ್ಲಿ ಸುದೀಪ್ ತಾಯಿ ಅನಾರೋಗ್ಯದಿಂದ ನಿಧನರಾಗಿದ್ರು. ಅಸಲಿಗೆ ಸುದೀಪ್ ತಾಯಿಗೆ ಮ್ಯಾಕ್ಸ್ ಸಿನಿಮಾ ನೋಡೋ ಆಸೆಯಿತ್ತಂತೆ. ಅದು ನನಸಾಗಲಿಲ್ಲ. ಆದ್ರೆ ಚಿತ್ರದ ಕೆಲ ಕ್ಲಿಪ್ ಗಳನ್ನ ನೋಡಿ ಸುದೀಪ್ ತಾಯಿ ಖುಷಿಪಟ್ಟಿದ್ರಂತೆ.
ಸುದೀಪ್ ತಮ್ಮ ಮಾಜಿ ಕುಚಿಕು ದರ್ಶನ್ಗೆ ಹಲವು ಬಾರಿ ಕೌಂಟರ್ ಕೊಟ್ರು. ಆರಂಭದಲ್ಲೇ ತನಗೆ ಬೆನ್ನು ನೋವು ಕುಳಿತು ಮತನಾಡ್ತಿನಿ ಅಂದ ಕಿಚ್ಚ, ಆದ್ರೆ ತನಗೆ ಬೆನ್ನು ನೋವು ಬಂದಿರೋದು ಒಳ್ಳೆ ಕಾರಣಕ್ಕೆ ಅಂತ ಹೇಳಿ, ಲೈಟ್ ಆಗಿ ದಾಸನ ಕಾಲೆಳೆದ್ರು.