ಒಂದು ಕಾಲದ ಆಪ್ತ ಗೆಳೆಯರು ಕಿಚ್ಚ, ದಚ್ಚು, ಮತ್ತೆ ಒಂದಾಗಲು ವೇದಿಕೆ ರೆಡಿಯಾಗಿದ್ಯಾ?

ದರ್ಶನ್ ಹಾಗು ಸುದೀಪ್ ಸ್ನೇಹ ಈಗ ಸವಿ ಸವಿ ನೆನಪಷ್ಟೆ. ಒಂದೇ ಜೀವ ಎರಡು ದೇಹ ಅನ್ನೋ ಹಾಗಿದ್ದ ಸುದೀಪ್​ ಹಾಗೂ ದರ್ಶನ್ ದೂರಾಗಿ ಏಳೆಂಟು ವರ್ಷಗಳಾಗಿದೆ. ಈ ಸ್ನೇಹ ಗಟ್ಟಿ ಮಾಡಿಕೊಳ್ಳಬೇಕು ಅಂತ ಇಬ್ಬರು ಪ್ರಯತ್ನ ಪಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಚಿತ್ರರಂಗದ ಕೆಲವರಂತು ಇವರಿಬ್ಬರನ್ನ ಒಂದು ಮಾಡೋಕೆ ಶತಪ್ರಯತ್ನ ಪಟ್ಟಿದ್ದಾರೆ... 
 

First Published Dec 28, 2024, 11:22 AM IST | Last Updated Dec 28, 2024, 12:20 PM IST

ರಕ್ತ ಹಂಚಿಕೊಂಡು ಹುಟ್ಟಿದವೇ ದೂರಾಗ್ತಾರೆ. ಇನ್ನು ಸ್ನೇಹಿತರು ದೂರ ಆಗದೇ ಇರ್ತಾರೆ. ಕುಚಿಗುಗಳಾಗಿದ್ದ ನಟ ದರ್ಶನ್ ಕಿಚ್ಚ ಸುದೀಪ್ ಫ್ರೆಂಡ್​ಶಿಪ್​ ಬ್ರೇಕಪ್ ಆಗಿರೋದು ಗೊತ್ತೇ ಇದೆ. ಆದ್ರೆ ಹಳೇ ಸ್ನೇಹಿತರು ಮತ್ತೆ ಯಾವಾಗ ಒಂದಾಗ್ತಾರೆ ಅಂತ ಕಾಯ್ತಿರೋರಿಗೆ ಆ ದಿನ ಬಂದೇ ಬರುತ್ತೆ ಅಂತ ಜ್ಯೋತಿಷಿ ಒಬ್ರು ಟೈಮ್, ಡೇಟ್​, ಮತ್ತು ವರ್ಷವನ್ನ ಫಿಕ್ಸ್​​ ಮಾಡಿದ್ದಾರೆ. ಹಾಗಾದ್ರೆ ಕಿಚ್ಚ ದಚ್ಚು ಒಂದಾಗೋದು ಯಾವ ವರ್ಷ..? ಇಲ್ಲಿದೆ ನೋಡಿ ಜ್ಯೋತಿಷ್ಯ ಶಾಸ್ತ್ರದ ಎಕ್ಸ್​​ಕ್ಲ್ಯೂಸೀವ್ ರಿಪೋರ್ಟ್... 

ದರ್ಶನ್ ಹಾಗು ಸುದೀಪ್ ಸ್ನೇಹ ಈಗ ಸವಿ ಸವಿ ನೆನಪಷ್ಟೆ. ಒಂದೇ ಜೀವ ಎರಡು ದೇಹ ಅನ್ನೋ ಹಾಗಿದ್ದ ಸುದೀಪ್​ ಹಾಗೂ ದರ್ಶನ್ ದೂರಾಗಿ ಏಳೆಂಟು ವರ್ಷಗಳಾಗಿದೆ. ಈ ಸ್ನೇಹ ಗಟ್ಟಿ ಮಾಡಿಕೊಳ್ಳಬೇಕು ಅಂತ ಇಬ್ಬರು ಪ್ರಯತ್ನ ಪಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಚಿತ್ರರಂಗದ ಕೆಲವರಂತು ಇವರಿಬ್ಬರನ್ನ ಒಂದು ಮಾಡೋಕೆ ಶತಪ್ರಯತ್ನ ಪಟ್ಟಿದ್ದಾರೆ... 

ಸ್ನೇಹ ಒಡೆದು ಚೂರು ಮಾಡಿಕೊಂಡಿರೋ ಸುದೀಪ್ - ದರ್ಶನ್​​​ ರನ್ನ ಒಂದು ಮಾಡೋಕೆ ಇದುವರೆಗೂ ಯಾರಿಂದಲೂ ಆಗಿಲ್ಲ. ಆದ್ರೆ ಪ್ರೊಡ್ಯೂಸರ್ ರಾಕ್​ಲೈನ್ ವೆಂಕಟೇಶ್ ಅದಕ್ಕೊಂದು ವೇದಿಕೆ ಮಾಡಿದ್ದಂತು ನಿಜ. ಸುಮಲತಾ ಅಂಬರೀಶ್ ಹುಟ್ಟುಹಬ್ಬದಲ್ಲಿ ಇಬ್ಬರನ್ನು ಮುಖಾಮುಖಿ ಮಾಡಿಸಿದ್ರು ರಾಕ್​ಲೈನ್. ಆದ್ರೆ ಅದು ಕೆಲಸ ಮಾಡಿರಲಿಲ್ಲ. 

ಸುದೀಪ್ ದರ್ಶನ್ ಮಧ್ಯೆ ಸ್ನೇಹ ಎಂದೂ ಸರಿ ಹೋಗಲ್ಲ ಅನ್ನೊ ವರ್ಗ ಒಂದಿದೆ. ಇವರಿಬ್ಬರು ಒಂದಾಗೋಕೆ ಟ್ರೈ ಮಾಡಿದ್ರೂ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದರ್ಶನ್ ಸುತ್ತ ಇರೋ ಒಂದಿಷ್ಟು ಫ್ಯಾನ್ಸ್​ ಅದಕ್ಕೆ ಅವಕಾಶ ಕೊಡಲ್ಲ. ಯಾಕಂದ್ರೆ ಇಬ್ಬರ ಮಧ್ಯೆ ಬೆಂಕಿ ಹಚ್ಚೋದೇ ಅವರ ಕೆಲಸ.

ಯಾರು ಏನೇ ಮಾಡ್ಕೊಳ್ಳಲಿ ಸುದೀಪ್ ದರ್ಶನ್ ಒಂದಾಗೋ ಟೈಮ್ ಬಂದೇ ಬರುತ್ತೆ ಅಂತ ಭವಿಷ್ಯ ಒಂದು ಹೊರ ಬಿದ್ದಿದೆ. ಜ್ಯೋತಿಷಿ ಒಬ್ರು ಈ ಮಾಜಿ ಕುಚಿಕುಗಳು ಒಂದಾಗೋಕೆ ಇನ್ನೊಂದು ವರ್ಷ ಬೇಕು ಎಂದಿದ್ದಾರೆ. ಯೆಸ್, ಜ್ಯೋತಿಷಿ ಪ್ರಶಾಂತ್ ಕಿಣಿ, ಕಿಚ್ಚ ಸುದೀಪ್ ಹಾಗು ದರ್ಶನ್​ ಸ್ನೇಹ 2026ಕ್ಕೆ ಸರಿ ಹೋಗುತ್ತೆ. ಇಬ್ಬರು ಒಂದಾಗುತ್ತಾರೆ ಎಂದಿದ್ದಾರೆ.

ಜ್ಯೋತಿಷಿ ಪ್ರಶಾಂತ್ ಕಿಣಿ ಈ ಹಿಂದೆ ದರ್ಶನ್ ಜೈಲಿನಲ್ಲಿದ್ದಾಗ ಭವಿಷ್ಯ ಹೇಳಿದ್ರು. 2027ಕ್ಕೆ ದರ್ಶನ್ ರಾಜಕೀಯಕ್ಕೆ ಬರುವುದು ಖಚಿತ ಎಂದಿದ್ದಾರೆ. ಈಗ ಫೆಬ್ರವರಿ 2026ಕ್ಕೆ ಕಿಚ್ಚ ದಚ್ಚು ಸ್ನೇಹ ಸರಿ ಹೋಗುತ್ತೆ ಎಂದಿದ್ದಾರೆ. ಈ ವಿಚಾರ ಕೇಳಿ ಇಬ್ಬರ ಅಸಂಖ್ಯಾತ-ಅಗಣಿತ ಅಭಿಮಾನಿಗಳು ಈ ಪವಾಡ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..