Rishabh Shetty : ರಾಜಕೀಯಕ್ಕೆ ಡಿವೈನ್ ಸ್ಟಾರ್ ಎಂಟ್ರಿ?: ರಿಷಬ್ ಶೆಟ್ಟಿ ಯಾವ ಪಕ್ಷದ ಸ್ಟಾರ್ ಕ್ಯಾಂಪೇನರ್?

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಿಂದೆ ರಾಜಕಾರಣಿಗಳು ಬಿದ್ದಿದ್ದು, ರಾಜಕೀಯಕ್ಕೆ ಬನ್ನಿ ಅಂತ ಕೆಲವರು ಆಫರ್ ಮಾಡಿದ್ದಾರಂತೆ.
 

Share this Video
  • FB
  • Linkdin
  • Whatsapp

ನಟ ರಿಷಬ್ ಶೆಟ್ಟಿ ರಾಜಕೀಯ ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ. ವ್ಯವಸ್ಥೆ ಬದಲಾವಣೆಗೆ ರಾಜಕೀಯಕ್ಕೆ ಬರಬೇಕಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಇದೀಗ ಎಲೆಕ್ಷನ್ ಬಿಸಿ ಎದುರಾಗಿದ್ದು, ಸ್ಟಾರ್'ಗಳನ್ನು ಚುನಾವಣೆ ಪ್ರಚಾರಕ್ಕೆ ಕರೆತರುವ ಪ್ರಯತ್ನ ಮಾಡ್ತಿದ್ದಾರೆ ರಾಜಕಾರಣಿಗಳು. ರಿಷಬ್ ಶೆಟ್ಟಿಗೂ ಸ್ಟಾರ್ ಕ್ಯಾಂಪೇನರ್ ಆಗೋಕೆ ಆಫರ್'ಗಳು ಬರುತ್ತಿವೆ. ನೀವು ಚುನಾವಣೆ ಪ್ರಚಾರಕ್ಕೆ ಹೋಗ್ತೀರಾ ಅಂತ ಕೇಳಿದ್ದಕ್ಕೆ ಡಿವೈನ್ ಸ್ಟಾರ್ ರಿಷಬ್ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದ್ದಾರೆ. ನಾನು ಓಟ್ ಹಾಕೋದಕ್ಕೆ ಹೋಗ್ತೇನೆ, ಫೋನ್ ಆಫ್ ಮಾಡಿಕೊಂಡು ಊರಿಗೆ ಹೋಗಿ ಸಿನಿಮಾ ಸ್ಕ್ರಿಪ್ಟ್ ಕೆಲಸ ಮಾಡ್ತೇನೆ ಅಂದಿದ್ದಾರೆ. ಆದ್ರೆ ನಾನು ಸ್ಟಾರ್ ಕ್ಯಾಂಪೇನರ್ ಆಗೋಲ್ಲ ಅಂತ ಕಾಂತಾರದ ಶಿವ ಎಲ್ಲಿಯೂ ಹೇಳಲಿಲ್ಲ.

Related Video