Kantara2: ಕಾಂತಾರ-2 ಚಿತ್ರಕ್ಕೆ ಅನುಮತಿ ಬೇಡಿದ ರಿಷಬ್ ಶೆಟ್ಟಿ: ಎಚ್ಚರಿಕೆ ಕೊಟ್ಟ ಪಂಜುರ್ಲಿ ದೈವ

ರಿಷಬ್ ಶೆಟ್ಟಿ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ಕಾಂತಾರಾ ಭಾಗ ಎರಡು ನಿರ್ಮಾಣಕ್ಕೆ ಅಪ್ಪಣೆ ಕೇಳಿದ್ದು, ದೈವವು ಅನುಮತಿಯನ್ನು ನೀಡಿದೆ.

Share this Video
  • FB
  • Linkdin
  • Whatsapp

'ಕಾಂತಾರ' ಸೂಪರ್ ಡೂಪರ್ ಹಿಟ್ ಆಗಲು ರಿಷಬ್ ಶೆಟ್ಟಿ ತಂಡದ ಶ್ರಮದ ಜೊತೆ, ಪಂಜುರ್ಲಿ ಗುಳಿಗ ದೈವದ ಆಶೀರ್ವಾದವೂ ಕಾರಣ. ಕಾಂತಾರ ಸಿನಿಮಾ ಮಾಡುವಾಗ ರಿಷಬ್ ಶೆಟ್ಟಿ ದೈವಗಳ ಬಳಿ ಅನುಮತಿ ಬೇಡಿದ್ರು. ಈಗ ಕಾಂತಾರ-2 ಗೂ ಸಿದ್ಧವಾಗಿರೋ ರಿಷಬ್ ತಾವು ನಂಬುವ ದೈವಗಳ ಬಳಿ ಹೋಗಿ ಅನುಮತಿ ಬೇಡಿದ್ದಾರೆ. ಮಂಗಳೂರಿನ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲಕ್ಕೆ ಕಾಂತಾರ ಚಿತ್ರತಂಡ ಹೋಗಿದ್ದು, ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ರಿಷಬ್ ಶೆಟ್ಟಿ ದೈವದ ಬಳಿ ಕಾಂತಾರಾ ಭಾಗ ಎರಡು ನಿರ್ಮಾಣಕ್ಕೆ ಅನುಮತಿ ಕೇಳಿದ್ದಾರೆ. ಕಾಂತಾರ' ಭಾಗ 2 ಸಿನಿಮಾ ಮಾಡಲು ದೈವವು ಅನುಮತಿಯನ್ನು ನೀಡಿದೆ. ಆದರೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ. ಇದೀಗ ಕಾಂತಾರ-2ಗೂ ಅಣ್ಣಪ್ಪ ಪಂಜುರ್ಲಿ ದೈವದ ಅಭಯ ಸಿಕ್ಕಿದೆ. ಕಾಂತಾರ ಮಾಡುವಾಗ ಮೊದಲು ಹತ್ತು ಬಾರಿ ಯೋಚನೆ ಮಾಡಿದ್ದೀರ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ ಕಾಂತಾರ-2 ಮಾಡಿ ನಿಮ್ಮ ಪ್ರಯತ್ನಕ್ಕೆ ಜಯ ಸಿಗುವಂತೆ ಮಾಡುತ್ತೇನೆ ಅಂತ ರಿಷಬ್'ಗೆ ದೈವ ಮಾತು ಕೊಟ್ಟಿದೆಯಂತೆ. ಹೀಗಾಗಿ ಈ ಖುಷಿಯಲ್ಲಿ ರಿಷಬ್ ಈಗ ಕಾಂತಾರ-2 ಕಥೆ ಸಿದ್ಧಪಡಿಸಿ ಶೂಟಿಂಗ್ ಹೋಗೋ ತಯಾರಿಯಲ್ಲಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video