Asianet Suvarna News Asianet Suvarna News

ಸೆನ್ಸೇಷನ್ ಸೃಷ್ಟಿಸಿದ ಕಾಂತಾರ: ಸಿನಿಮಾವನ್ನ ಗೆಲ್ಲಿಸಿದ್ದೇ ಪಂಜುರ್ಲಿ & ಗುಳಿಗ ದೈವ!

ಸೆನ್ಸೇಷನ್ ಸೃಷ್ಟಿಸಿದ ಕಾಂತಾರ ರೋಚಕವಾಗಿದೆ ದೈವ ರಹಸ್ಯ. ಪಂಜುರ್ಲಿ & ಗುಳಿಗ ಸಿನೆಮಾವನ್ನ ಗೆಲ್ಲಿಸಿದ್ದು ಹೇಗೆ? ಒಂದೂ ಪ್ರಮಾದವಾಗದಂತೆ ಬೆನ್ನಿಗೆ ನಿಂತಿದ್ದು ರಿಯಲ್ ವೇಷಧಾರಿ!  

Oct 6, 2022, 11:58 PM IST

ಕಾಂತಾರ ಸಿನೆಮಾ ಸದ್ದೇ ಎಲ್ಲಾ ಕಡೆ ಕೇಳ್ತಾ ಇದೆ. ರಿಷಬ್ ಶೆಟ್ಟಿಯವರ ಸಿನೆಮಾ ದೇಶ ವಿದೇಶಗಳಲ್ಲಿ ಚರ್ಚೆ ಆಗ್ತಾ ಇದೆ. ಕನ್ನಡ ಸಿನೆಮಾ ಇಂಡಸ್ಟ್ರೀ ಕೂಡ ಕೆಜಿಎಫ್, ಚಾರ್ಲಿ, ವಿಕ್ರಾಂತ್ ರೋಣದಂತದ ಬೆಸ್ಟ್ ಸಿನೆಮಾಗಳ ಜೊತೆ ಕಾಂತಾರದೊಂದಿಗೆ ಲೋಕವಿಖ್ಯಾತವಾಗ್ತಿದೆ. ಕಾಂತಾರ ಸಿನೆಮಾದ ಜೀವಾಳವೇ ತುಳುನಾಡಿನ ದೈವಗಳು. ರಿಷಬ್ ಶೆಟ್ಟಿಯವರು ಕಾಂತಾರ ಸಿನೆಮಾದಲ್ಲಿ ದೈವದ ವೇಷವನ್ನ ಹಾಕಿದ್ದಾರೆ ಹಾಗೂ ಅದ್ಭುತವಾಗಿ ನಟನೆ ಕೂಡ ಮಾಡಿದ್ದಾರೆ. ಅಲ್ಲಿ ಎರಡು ದೈವಗಳು ಕಾಣಸಿಗೋದು. ಪಂಜುರ್ಲಿ ಹಾಗೂ ಗುಳಿಗ. ಪಂಜುರ್ಲಿಯ ಬಂಟನೇ ಗುಳಿಗ! ಇನ್ನು ಕಾಂತಾರ 2 ಸಿನೆಮಾ ಬರುತ್ತಾ ಎಂಬ ಪ್ರಶ್ನೆಗೆ ಅದು ದೈವಿಚ್ಚೆಗೆ ಬಿಟ್ಟಿದ್ದು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.