'ಆಸ್ಕರ್' ಸ್ಪರ್ಧೆಯಲ್ಲಿ 'ಕಾಂತಾರ' ಹತ್ತಿರ: 'ವಿಕ್ರಾಂತ್ ರೋಣ' ಕೂಡ ನಾಮ ನಿರ್ದೇಶನ

ನಮ್ಮ ಕನ್ನಡದ ಹೆಮ್ಮೆ ಕಾಂತಾರ ವಿಶ್ವ ಸಿನಿ ಜಗತ್ತಿನ ದಿಗ್ಗಜ ಪ್ರಶಸ್ತಿ ಆಸ್ಕರ್ ಮುಡಿಗೇರಿಸಿಕೊಳ್ಳಲು ಇನ್ನಷ್ಟು ಹತ್ತಿರವಾಗಿದೆ. 

Share this Video
  • FB
  • Linkdin
  • Whatsapp

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಾಧನೆ ಉತ್ತುಂಗದಲ್ಲಿದೆ. ಹೊಂಬಾಳೆ ಪ್ರೊಡಕ್ಷನ್ ಹೆಸರು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಭಾರತೀಯ ಸಿನಿ ಜಗತ್ತಿನ ಹೃದಯ ಗೆದ್ದಿರೋ ಕಾಂತಾರ ಸಿನಿಮಾ. ಕಾಂತಾರಕ್ಕೆ ಸಿಕ್ಕ ಜನ ಮೆಚ್ಚುಗೆ ನೋಡಿ ಈ ಸಿನಿಮಾ ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೊಡಕ್ಷನ್ ಆಸ್ಕರ್ ಪ್ರಶಸ್ತಿ ರೇಸ್'ಗೆ ಕಾಂತಾರ ಅರ್ಜಿ ಸಲ್ಲಿಸಿತ್ತು. ಇದೀಗ ಕಾಂತಾರ ಸಿನಿಮಾ ಎರಡು ವಿಭಾಗಗಳ ಪ್ರಶಸ್ತಿ ರೇಸ್'ಗೆ ನಾಮ ನಿರ್ದೇಶನಗೊಂಡಿದೆ. ಒಂದು ಅತ್ಯತ್ತಮ ಸಿನಿಮಾ ಮತ್ತೊಂದು ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರ ನಾಮ ನಿರ್ದೇಶನಗೊಂಡಿದೆ ಅಂತ ಹೊಂಬಾಳೆ ಪ್ರೊಡಕ್ಷನ್ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಕನ್ನಡದ ಮತ್ತೊಂದು ಹೆಮ್ಮೆಯ ಸಿನಿಮಾ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಕೂಡ ಆಸ್ಕರ್ ಪ್ರಶಸ್ತಿ ರೇಸ್'ನಲ್ಲಿ ನಾಮ ನಿರ್ದೇಶನಗೊಂಡಿದೆ.

Related Video