Asianet Suvarna News Asianet Suvarna News

ಕಾಳಿದಾಸ ಕನ್ನಡ ಮೇಷ್ಟ್ರಿಗೆ 21 ನಟಿಯರ ಸಾಥ್!

Nov 15, 2019, 4:23 PM IST

'ಕಾಳಿದಾಸ ಕನ್ನಡ ಮೇಷ್ಟ್ರು' ಟ್ರೇಲರ್ ಮತ್ತು ಟೈಟಲ್ ನಿಂದಲೇ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ.  ಒಂದೊಳ್ಳೆ ಕಥೆಯನ್ನಿಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗಿರೋ ಕವಿರಾಜ್ ಅಂಡ್ ಟೀಂ ಗೆ 21 ನಟಿ ಮಣಿಯರು ಸಾಥ್ ಕೊಟ್ಟಿದ್ದು ಸದ್ಯ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ಪ್ರಮೋಷನಲ್ ಸಾಂಗ್ ಇತ್ತೀಚಿಗಷ್ಟೇ ರಿಲೀಸ್ ಆಗಿದೆ. 

ಟೀಸರ್ ಮೂಲಕ ಮಗನ ಹೆಸರು ರಿವೀಲ್ ಮಾಡಿದ ರಿಷಬ್ ಶೆಟ್ಟಿ

'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಜಗ್ಗೆಶ್ ನಾಯಕನಾಗಿ ನಟಿಸಿರೋ ಚಿತ್ರ. ಚಿತ್ರದಲ್ಲಿ ಮೇಘನಾ ಗಾಂವ್ಕರ್ ನಾಯಕಿಯಾಗಿ ಅಭಿನಯಿಸಿದ್ದು ಈಗ ಪ್ರಮೋಷನ್ ಸಾಂಗ್ ಮೂಲಕ ರಚಿತಾ ರಾಮ್, ಹರಿಪ್ರಿಯಾ, ಅಮೂಲ್ಯ, ಅದಿತಿ ಪ್ರಭುದೇವ, ನಿಶ್ವಿಕಾ ನಾಯ್ಡು, ಕೃಷಿ ತಾಪಂಡ, ರೂಪಿಕ, ಹರ್ಷಿಕಾ ಪೂಣಚ್ಚ, ಕಾರುಣ್ಯ ರಾಮ್, ಸಿಂಧು ಲೋಕನಾಥ್, ಶುಭಾ ಪೂಂಜ, ಸೋನು ಗೌಡ ಸೇರಿದಂತೆ ಅನೇಕ ನಟಿಯರು ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.