Asianet Suvarna News Asianet Suvarna News

ಅಗೋಚರ ಶಕ್ತಿಯ ಸುತ್ತ ಫ್ಯಾಂಟಸಿ ಲೋಕ ಅಬ್ಬಬ್ಬಾ ಅನ್ಸುತ್ತೆ ಭಜರಂಗಿ 2 ಟ್ರೇಲರ್

ಭಯ ಹುಟ್ಟಿಸುವ ವಿಲನ್ಸ್‌ ಲುಕ್‌ಗಳು, ಆಗೋಚರ ಶಕ್ತಿಯ ಛಾಯೆ, ಇವೇನು ಇಂತಹ ಪಾತ್ರಗಳು. ಒಂದಾ ಎರಡಾ 'ಭಜರಂಗಿ 2'  ಟ್ರೇಲರ್ ನೋಡುತ್ತಿದ್ದರೆ ಅಲ್ಲೊಂದು ಫ್ಯಾಂಟಸಿ ಲೋಕವೇ ಸೃಷ್ಟಿಯಾಗಿರುವುದು ಗೊತ್ತಾಗುತ್ತದೆ.

First Published Oct 22, 2021, 1:16 PM IST | Last Updated Oct 22, 2021, 1:24 PM IST

ಬೆಂಕಿ ಉಗುಳೋ ಕಣ್ಗಳು, ಭಯಾ ಹುಟ್ಟಿಸುವ ಪಾತ್ರಗಳು, ಅದ್ಧೂರಿ ಸೆಟ್‌ಗಳು, ಥ್ರಿಲ್‌ ಆಗಿಸೋ ವಿಶ್ಯುಯಲ್ಸ್‌, ಅಬ್ಬಬ್ಬಾ ಅನ್ಸುತ್ತೆ 'ಭಜರಂಗಿ 2' (Bhajarangi 2) ಟ್ರೇಲರ್. ಒಂದಾ ಎರಡಾ ಟ್ರೇಲರ್ ನೋಡುತ್ತಿದ್ದರೆ ಅಲ್ಲೊಂದು ಫ್ಯಾಂಟಸಿ (Fantasy) ಲೋಕವೇ ಸೃಷ್ಟಿಯಾಗಿರುವುದು ಗೊತ್ತಾಗುತ್ತೆ. ಇದು ಅಕ್ಟೋಬರ್ 20 ರಂದು ಬಿಡುಗಡೆಯಾದ 'ಭಜರಂಗಿ 2' ಚಿತ್ರದ ಟ್ರೇಲರ್ ಹೈಲೈಟ್ಸ್. ಎ.ಹರ್ಷ (A.Harsha) ಆಕ್ಷನ್ ಕಟ್ ಹೇಳಿರುವ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ (Shivarajkumar) ಅಭಿನಯದ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ಚಿತ್ರವು ಸಿನಿರಸಿಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದ್ದು, ನೋಡುಗರಿಗೆ ಒಂದೊಂದು ಫ್ರೇಮ್ ಫ್ರೆಶ್ ಅಂತಾ ಅನ್ಸುತ್ತೆ, ಅಷ್ಟೇ ಅಲ್ಲ, ಒಂದೊಂದು ದೃಶ್ಯವೂ ಭಯಾನಕ ಲೋಕಕ್ಕೆ ಕೊಂಡೊಯ್ಯುತ್ತದೆ. 

ಭಜರಂಗಿ 2 ಭಕ್ತಿಪ್ರಧಾನ ಮಾಸ್‌ ಸಿನಿಮಾ: ಶಿವರಾಜ್‌ ಕುಮಾರ್‌

ಭಿನ್ನ ವಿಭಿನ್ನ ಮ್ಯಾನರೀಸಂನ ಪಾತ್ರಗಳು, ಭಯ ಹುಟ್ಟಿಸುವ ವಿಲನ್ಸ್‌ ಲುಕ್‌ಗಳು, ಆಗೋಚರ ಶಕ್ತಿಯ ಛಾಯೆ, ಇವೇನು ಇಂತಹ ಪಾತ್ರಗಳು ಎಂದು ಪ್ರಶ್ನೆ ಮೂಡುವಂತೆ ಮಾಡುತ್ತದೆ. ಅರ್ಜುನ್ ಜನ್ಯಾ (Arjun Janya) ಮ್ಯೂಸಿಕ್ ಅಲ್ಟಿಮೇಟ್ ಆಗಿದ್ದು, ಕನ್ನಡ ಚಿತ್ರರಂಗದಲ್ಲಿ ಇದೀಗ ಹೊಸ ಟ್ರೆಂಡ್ ಹುಟ್ಟುಹಾಕಿದೆ ಭಜರಂಗಿ 2 ಟ್ರೇಲರ್. ಈ ಚಿತ್ರದಲ್ಲಿ ಜಾಕಿ ಭಾವನಾ (Bhavana), ಸೌರವ್ ಲೋಕೇಶ್ (Sourav Lokesh), ನಟಿ ಶ್ರುತಿ  (Shruti), ಶಿವರಾಜ್ ಕೆ.ಆರ್.ಪೇಟೆ, ಮಂಜು ಪಾವಗಡ ಸೇರಿದಂತೆ ವಿಶೇಷವಾದ ತಾರಾಗಣವಿದೆ. ಸ್ವಾಮಿ ಅವರ ಅದ್ಭುತ ಕ್ಯಾಮೆರಾ ಕೈಚಳಕವಿರುವ ಈ ಚಿತ್ರ ಇದೇ ಅಕ್ಟೋಬರ್ 29 ರಂದು ಬಿಡುಗಡೆಯಾಗುತ್ತಿದ್ದು, ಹರ್ಷ, ಶಿವಣ್ಣ, ಜಯಣ್ಣ ಮೂವರ ಕಾಂಬಿನೇಷನ್‌ನ ಈ ಚಿತ್ರ ಸಿನಿರಸಿಕರನ್ನು ಯಾವ ರೀತಿ ಮೋಡಿ ಮಾಡಲಿದೆ ಎಂಬುದು ತಿಳಿಯಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories