Asianet Suvarna News Asianet Suvarna News

ಪ್ರೇಮಕವಿ ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು, 10.30ಕ್ಕೆ ಸುದ್ದಿಗೋಷ್ಠಿ!

Oct 4, 2020, 10:01 AM IST

ಬೆಳಗಾವಿ(ಅ.04): ಪ್ರೇಮ ಕವಿ ಕೆ. ಕಲ್ಯಾಣ್ ದಾಂಪತ್ಯ ಬದುಕಿನಲ್ಲಿ ಬಿರುಕು ಮೂಡಿದ್ದು, ಭಾನುವಾರ ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಈ ಸುದ್ದಿಗೋಷ್ಠಿ ನಡೆಯಲಿದೆ. 

ತನ್ನ ಪತ್ನಿ ಮಾಡಿರುವ ಆರೋಪಕ್ಕೆ ಕಲ್ಯಾಣ್ ಸ್ಪಷ್ಟೀಕರಣ ನೀಡಲಿದ್ದಾರೆ. ಕಲ್ಯಾಣ್ ಪತ್ನಿ ತನ್ನ ಗಂಡನ ವಿರುದ್ಧ ದೌರ್ಜನ್ಯ ಎಸಗಿರುವ ಆರೋಪವನ್ನು ಮಾಡಿದ್ದರು. ಅಲ್ಲದೇ ವಿಚ್ಛೇದನ ಕೋರಿ ಬೆಳಗಾವಿಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.