ಎಲ್ಲೆಲ್ಲೂ ಕನ್ನಡ ಸಿನಿಮಾ ಹಾಡು ಶಿವ ಶಿವಾ.., ರೀಲ್ಸ್​ ಜಗತ್ತಿನಲ್ಲೂ 'ಕೆಡಿ'ದೇ ಹವಾ!

ನೂರಾರು ಡಾನ್ಸರ್ಸ್ ಮಧ್ಯೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರೀಷ್ಮಾ ನಾಣಯ್ಯ ಮಸ್ತ್​ ಡಾನ್ಸ್.. ಮೈ ನರ ನಾಡಿಯಲ್ಲೆಲ್ಲಾ ಕಿಕ್​ ಕೊಡೋ ಹಾಗಿರೋ ಅರ್ಜುನ್​ ಜ್ಯನ್ಯ ಸೃಷ್ಟಿಸಿದ ಮ್ಯೂಸಿಕ್ ಬೀಟ್. ಡಾನ್ಸ್​ನ ಕಿಚ್ಚು ಹೆಚ್ಚಾಗೋ ಹಾಗೆ ಪ್ರೇಮ್ ಸೃಷ್ಟಿಸಿದ ಲಿರಿಕ್ಸ್.. ಇದು ಕೆಡಿಯ ಮೊದಲ ಹಾಡಿನ ಖದರ್.. ..

First Published Jan 5, 2025, 1:05 PM IST | Last Updated Jan 5, 2025, 1:05 PM IST

ವರ್ಷದ ಕೊನೆಯಲ್ಲಿ ಸೂಪರ್ ಸ್ಟಾರ್ಸ್​ ಸಿನಿಮಾ ಬಂದು ಗೆದ್ದಾಗಿದೆ. ಈಗ ಕನ್ನಡ ಸಿನಿ ಪ್ರೇಕ್ಷಕರ ಕಣ್ಣು ಬಿದ್ದಿರೋದು ಕೆಡಿ ಮೇಲೆ. ಡೈರೆಕ್ಟರ್​ ಪ್ರೇಮ್​ ಮತ್ತು ಧ್ರುವ ಸರ್ಜಾ ಅದ್ಯಾವ ಪ್ರಪಂಚ ಸೃಷ್ಟಿಸಿದ್ದಾರೆ ಅಂತ ನೋಡೋ ಕಾತುರ ಹೆಚ್ಚಾಗಿದೆ. ಸಿನಿ ಪ್ರೇಕ್ಷಕರಲ್ಲಿ ಕೆಡಿಯ ಹುಚ್ಚು ಹೆಚ್ಚಾಗಿಸೋದ್ರಲ್ಲಿ ಶಿವ ಶಿವ ಸಾಂಗ್ ಕೊಡುಗೆ ದೊಡ್ಡದಿದೆ. ಈಗ ಎಲ್ಲೆಲ್ಲೂ ಶಿವ ಶಿವ ಹಾಡಿನ ಸೌಂಡೇ ಕೇಳಿಸುತ್ತಿದೆ. ಈ ಶಿವನ ಸಾಂಗ್ ಟ್ರೆಂಡ್ ಹೇಗಿದೆ ಅಂತ ನೋಡೋಣ ಬನ್ನಿ.. 

ನೂರಾರು ಡಾನ್ಸರ್ಸ್ ಮಧ್ಯೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರೀಷ್ಮಾ ನಾಣಯ್ಯ ಮಸ್ತ್​ ಡಾನ್ಸ್.. ಮೈ ನರ ನಾಡಿಯಲ್ಲೆಲ್ಲಾ ಕಿಕ್​ ಕೊಡೋ ಹಾಗಿರೋ ಅರ್ಜುನ್​ ಜ್ಯನ್ಯ ಸೃಷ್ಟಿಸಿದ ಮ್ಯೂಸಿಕ್ ಬೀಟ್. ಡಾನ್ಸ್​ನ ಕಿಚ್ಚು ಹೆಚ್ಚಾಗೋ ಹಾಗೆ ಪ್ರೇಮ್ ಸೃಷ್ಟಿಸಿದ ಲಿರಿಕ್ಸ್.. ಇದು ಕೆಡಿಯ ಮೊದಲ ಹಾಡಿನ ಖದರ್.. 

ಯೆಸ್, ಸಂಗೀತ ಲೋಕದಲ್ಲಿ ಈಗ ಕೆಡಿ ಹಾಡಿನದ್ದೇ ದರ್ಬಾರ್ ನಡೆಯುತ್ತಿದೆ. ಶಿವ ಶಿವಾ ಅಂತ ಧ್ರುವ ಹಾಡಿ ಕುಣಿದಿದ್ದೇ ಕುಣಿದಿದ್ದು. ಈ ಹಾಡು ಈಗ ರೀಲ್ಸ್ ಜಗತ್ತಿನ ಮಹರಾಜ ಆಗಿ ಮೆರೆಯುತ್ತಿದೆ. ಈ ಸಾಂಗ್ ರಿಲೀಸ್ ಆಗಿ ಜಸ್ಟ್​ 10 ದಿನ ಆಗಿವೆ. ಆಗ್ಲೆ ಒಂದು ಲಕ್ಷಕ್ಕೂ ಅಧಿಕ ಮಂದಿ ಹಾಡಿನ ರೀಲ್ಸ್ ಮಾಡಿ ಹರಿ ಬಿಟ್ಟಿದ್ದಾರೆ.  ಸೋಷಿಯಲ್ ಮಿಡಿಯಾ ತುಂಬಾ ಕೇಡಿ ಹಾಡೇ ರಿಂಗಣಿಸ್ತಾ ಇದೆ. 

ಡೈರೆಕ್ಟರ್ ಪ್ರೇಮ್ ಸಿನಿಮಾಗಳಲ್ಲಿ ಸಂಗೀತವೇ ಫಸ್ಟ್.. ಪ್ರೇಮ್​ ಸಖತ್​ ಆಗಿರೋ ಹಾಡುಗಳನ್ನ ಇಟ್ಟಿರ್ತಾರೆ. ಇನ್ನು ಪ್ಯಾನ್ ಇಂಡಿಯಾ ಕಾನ್ಸೆಪ್ಟ್​​​​ನಲ್ಲಿ ಬರುತ್ತಿರೋ ಕೆಡಿಯಲ್ಲಿ ಹಾಡುಗಳು ಅದ್ಧೂರಿ ಹಾಡುಗಳ ಹಬ್ಬ ಇರುತ್ತೆ. ಕನ್ನಡದಲ್ಲಿ ಜೋಗಿ ಪ್ರೇಮ್ ಹಾಗು ಕೈಲಾಶ್ ಕೇರ್​​​ ಗಾಯನಕ್ಕೆ ಧ್ರುವ ಸಖತ್ ಸ್ಟೆಪ್ಟ್ ಹಾಕಿದ್ದಾರೆ. ಈ ಹಾಡು ಈಗ ಎಲ್ಲರ ದಿಲ್ ಕದ್ದು ಮುನ್ನುಗ್ಗುತ್ತಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ... 

Video Top Stories