ಕಮಲ್ ಹಾಸನ್‌ ಕನ್ನಡ ಭಾಷಾ ಕಲಹ: ಈಗ ಎಲ್ಲಿಗೆ ಬಂತು? ಶಿವರಾಜ್‌ಕುಮಾರ್‌ ಏನಂದ್ರು?

ಕಮಲ್ ಹಾಸನ್ ಕನ್ನಡ ಭಾಷೆಯ ಕುರಿತು ಆಡಿದ ಮಾತುಗಳ ವಿರುದ್ದ ಕರ್ನಾಟಕದಾದ್ಯಂತ ಪ್ರತಿಭಟನೆ ನಡೆದಿವೆ. ಈಗಲೂ ನಡೀತಾ ಇವೆ. ಆದ್ರೆ ಇಷ್ಟೆಲ್ಲಾ ಆದರೂ ಕಮಲ್ ಹಾಸನ್ ಮಾತ್ರ ಕ್ಷಮೆ ಕೇಳಲ್ಲ ಅಂತ ದೌಲತ್ತಿನ ಮಾತನಾಡಿದ್ದಾರೆ. ಆ ವೇದಿಕೆಯಲ್ಲಿ ಕಮಲ್​ ಎದುರೇ ಕುಳಿತಿದ್ದ ಈ ಶಿವಣ್ಣ ಬಗ್ಗೆ ಹೇಳಿದ್ದೇನು..?

Share this Video
  • FB
  • Linkdin
  • Whatsapp

ಕಮಲ್ ಹಾಸನ್ ಸೃಷ್ಟಿಸಿದ ಭಾಷಾ ವಿವಾದ ಕರುನಾಡಿನಲ್ಲಿ ಕಿಚ್ಚು ಹಚ್ಚಿದೆ. ಚೆನ್ನೈನಲ್ಲಿ ನಡೆದ ಥಗ್ ಲೈಫ್ ಚಿತ್ರದ ಪ್ರಮೋಷನಲ್ ಇವೆಂಟ್​ನಲ್ಲಿ ಕಮಲ್ ಹಾಸನ್ ಶಿವಣ್ಣನೆದರು ನಿಮ್ಮ ಕನ್ನಡ ಭಾಷೆಯ ಮೂಲ ತಮ್ಮ ತಮಿಳು ಅನ್ನೋ ಮಾತು ಹೇಳಿದ್ರು. ಸಹಜವಾಗೇ ಇದು ವಿವಾದದ ಕಿಡಿ ಹೊತ್ತಿಸಿತ್ತು. ಈ ಕುರಿತು ಕರುನಾಡಿನಾದ್ಯಂತ ಪ್ರತಿಭಟನೆಗಳು ನಡೆದಿದ್ವು. ಕನ್ನಡದ ಅನೇಕ ಭಾಷಾ ತಜ್ಞರು, ಕಲಾವಿದರು, ನಿರ್ದೇಶಕರು, ಸಾಹಿತಿಗಳು ಕಮಲ್ ಹಾಸನ್ ಹೇಳಿಕೆಯನ್ನ ಖಂಡಿಸಿದ್ದಾರೆ. ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ವಿರುದ್ದ ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಆದ್ರೆ ತಮ್ಮ ವಿರುದ್ದ ಇಷ್ಟೆಲ್ಲಾ ಪ್ರತಿಭಟನೆ ನಡೆದರೂ ಕಮಲ್ ಹಾಸನ್ ಮಾತ್ರ ಕ್ಷಮೆ ಕೇಳಲು ಸಿದ್ದ ಇಲ್ಲ. ಬುಧವಾರ ಕೇರಳದ ತಿರುವನಂತಪುರದಲ್ಲಿ ನಡೆದ ಥಗ್ ಲೈಫ್ ಇವೆಂಟ್​ನಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದಾಗ ಕಮಲ್ ಹಾಸನ್ ನಾನು ಸರಿಯಾದ ಮಾತನ್ನೇ ಹೇಳಿದ್ದು, ಸೋ ಕ್ಷಮೆ ಕೇಳಲ್ಲ ಅಂತ ವಿತಂಡವಾದ ಮಾಡಿದ್ದಾರೆ.
ಬೈಟ್ : ಕಮಲ್ ಹಾಸನ್, ನಟ 

Related Video