ಮೈಸೂರಿಗೆ ತೆರಳಲು ಅನುಮತಿ ಪಡೆದುಕೊಂಡ ನಟ ದರ್ಶನ್ ಮುಂದಿನ ಹೆಜ್ಜೆ?
ಮೊನ್ನೆ, ಶುಕ್ರವಾರ 57ನೇ ಸಿಸಿಎಚ್ ಕೋರ್ಟ್ಗೆ ಹಾಜರಾಗಿರೋ ದರ್ಶನ್ ಮತ್ತೆ ಐದು ದಿನಗಳ ಕಾಲ ಮೈಸೂರಿಗೆ ತೆರಳಲು ಅನುಮತಿ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ದರ್ಶನ್ ಪರ ವಕೀಲರು ಮತ್ತೊಂದು ಅರ್ಜಿಯನ್ನ ಕೋರ್ಟ್ಗೆ ಸಲ್ಲಿಕೆ ಮಾಡಿದ್ದಾರೆ. ಈ ಕೇಸ್ನಲ್ಲಿ ...
ಮೊನ್ನೆ, ಶುಕ್ರವಾರ 57ನೇ ಸಿಸಿಎಚ್ ಕೋರ್ಟ್ಗೆ ಹಾಜರಾಗಿರೋ ನಟ ದರ್ಶನ್‌ಗೆ (Darshan) ಮತ್ತೆ ಐದು ದಿನಗಳ ಕಾಲ ಮೈಸೂರಿಗೆ ತೆರಳಲು ಅನುಮತಿ ಸಿಕ್ಕಿದೆ. ಇದರ ಜೊತೆಗೆ ದರ್ಶನ್ ಪರ ವಕೀಲರು ಮತ್ತೊಂದು ಅರ್ಜಿಯನ್ನ ಕೋರ್ಟ್ಗೆ ಸಲ್ಲಿಕೆ ಮಾಡಿದ್ದಾರೆ. ಈ ಕೇಸ್ನಲ್ಲಿ ಸಾಕ್ಷನಾಶಕ್ಕೆ ಬಳಕೆ ಮಾಡಲಾಗಿದೆ ಅಂತ ಹೇಳಿರೋ 40 ಲಕ್ಷ ರೂಪಾಯಿಯನ್ನ ಪೊಲೀಸರು ವಶ ಪಡಿಸಿಕೊಂಡಿದ್ರು. ಈ 40 ಲಕ್ಷವನ್ನ ವಾಪಾಸ್ ಕೊಡಿ ಅಂತ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆಯ ಬಳಿಕ ಇದನ್ನ ಮುಚ್ಚಿ ಹಾಕೋದಕ್ಕೆ ಮುಂದಾಗಿದ್ದ ದರ್ಶನ್ & ಟೀಮ್, ಮೂವರನ್ನ ಸರೆಂಡರ್ ಮಾಡಿಸಿ ಅವರಿಗೆ ಹಣ ಕೊಡುವ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ. ಇದಕ್ಕಾಗಿ ಮೋಹನ್ ರಾಜ್ ಎಂಬುವವರಿಂದ 40 ಲಕ್ಷ ಹಣ ತರಿಸಿಕೊಂಡಿದ್ದು, ಇದರ ಜಾಡು ಹಿಡಿದಿದ್ದ ಪೊಲೀಸರು ನಟ ದರ್ಶನ್ ಮನೆ, ಪ್ರದೂಶ್ ಹಾಗೂ ವಿಜಯಲಕ್ಷ್ಮಿ ಮನೆಯಲ್ಲಿ 40.4 ಲಕ್ಷ ಹಣವನ್ನ ಸೀಜ್ ಮಾಡಿದ್ರು ಎನ್ನಲಾಗಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...