ನಾಳೆ ಶಿಡ್ಲಘಟ್ಟದಲ್ಲಿ 'ಕಬ್ಜ' ಆಡಿಯೋ ಬಿಡುಗಡೆ: ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆ

ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಕಬ್ಜ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರಲಿದ್ದಾರೆ.

Share this Video
  • FB
  • Linkdin
  • Whatsapp

ಕನ್ನಡಿಗರ ಮತ್ತೊಂದು ಹೆಮ್ಮೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಬ. ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಹಾಗೂ ಮುದ್ದಾದ ಚೆಲುವೆ ಶ್ರೆಯಾ ಶರಣ್ ಸೇರಿದಂತೆ ಅದ್ದೂರಿ ತಾರಾಗಣ ಇರೋ ಕಬ್ಜ ಅಪ್ಪು ಹುಟ್ಟುಹಬ್ಬಕ್ಕೆ ರಿಲೀಸ್ ಆಗ್ತಿದೆ. ಹೀಗಾಗಿ ಸಿನಿಮಾದ ಪ್ರಚಾರಕ್ಕೆ ಹೈದರಾಬಾದ್ ಹಾಗೂ ಚೆನ್ನೈಗೆ ಹೋಗಿ ಬಂದಿರೋ ಕಬ್ಜ ಗ್ಯಾಂಗ್, ಈಗ ಕರ್ನಾಟದಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಿದೆ. ಶಿಡ್ಲಘಟ್ಟದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಚೀಫ್ ಗೆಸ್ಟ್ ಆಗಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್, ದುನಿಯಾ ವಿಜಯ್ ಹಾಗೂ ತೆಲುಗು ಚಿತ್ರರಂಗದ ನಟ ನಿತಿನ್, ತಮಿಳು ಚಿತ್ರರಂಗದ ಹೆಸರಾಂತ ಸ್ಟಾರ್ ಒಬ್ರು ಬರ್ತಾ ಇದ್ದಾರೆ. 

Related Video