Asianet Suvarna News Asianet Suvarna News
breaking news image

ಅಣ್ಣಾವ್ರ ಜನ್ಮದಿನದಂದು ನಡೆಯಿತು ಧ್ರುವ-ಪ್ರೇಮ್ ಚಿತ್ರದ ಮುಹೂರ್ತ.!

ಏಪ್ರಿಲ್ 24 ಡಾ. ರಾಜ್ ಕುಮಾರ್ ಹುಟ್ಟುಹಬ್ಬದಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಹಾಗು ಜೋಗಿ ಪ್ರೇಮ್ (Jogi Prem) ಯುದ್ಧಕ್ಕೆ ಮುನ್ನುಡಿ ಬರೆದಿದ್ದಾರೆ. ಮೈಸೂರಿನ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದು ಪ್ರೇಮ್ ಧ್ರುವ ಹೊಸ ಸಿನಿಮಾ ಶುರು ಮಾಡಿದ್ದಾರೆ. 

ವರನಟ ಡಾಕ್ಟರ್ ರಾಜ್ ಕುಮಾರ್ (Rajkumar) ಅದೆಷ್ಟೋ ಮಂದಿಯ ಅದೃಷ್ಟದ ಭಾಗಿಲು. ಅಣ್ಣಾವ್ರ ಹುಟ್ಟಿದ ದಿನವನ್ನ ಮನೆ ದೇವರ ದಿನದಂತೆ ಅದೆಷ್ಟೋ ಜನ ಆಚರಿಸುತ್ತಾರೆ. ತಮಗೆ ಬೇಕಾಗಿದ್ದನ್ನ ಅಣ್ಣಾವ್ರನ್ನ ನೆನೆಸಿಕೊಂಡು  ಬೇಡಿಕೊಂಡ್ರೆ ಅದು ಖಂಡಿತ ನೆರವೇರುತ್ತೆ ಅನ್ನೋ ಮಾತಿದೆ. ಏಪ್ರಿಲ್ 24 ಡಾ. ರಾಜ್ ಕುಮಾರ್ ಹುಟ್ಟುಹಬ್ಬದಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಹಾಗು ಜೋಗಿ ಪ್ರೇಮ್ (Jogi Prem) ಯುದ್ಧಕ್ಕೆ ಮುನ್ನುಡಿ ಬರೆದಿದ್ದಾರೆ. ಮೈಸೂರಿನ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದು ಪ್ರೇಮ್ ಧ್ರುವ ಹೊಸ ಸಿನಿಮಾ ಶುರು ಮಾಡಿದ್ದಾರೆ. 

ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಇಬ್ಬರು ಸೇರಿ ಸಿನಿಮಾ ಮಾಡ್ತಿದ್ದಾರೆ ಅನ್ನೋ ಸಮಾಚಾರ ಕಳೆದ ವರ್ಷ ರಿವೀಲ್ ಆಗಿತ್ತು.. ಪ್ರೇಮ್ ತನ್ನ ಕಲ್ಪನೆ ಕಥೆಗೆ ಧ್ರುವ ಜೊತೆ ಸೇರಿದ್ದೇ ದೊಡ್ಡ ಸೆನ್ಸೇಷನ್ ಆಗಿತ್ತು. ಇದೀಗ ಈ ಸಿನಿಮಾವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಭಾಷೆಯಲ್ಲಿ ನಿರ್ಮಾಣ ಮಾಡಲಾಗ್ತಿದೆ. ಕನ್ನಡ ಸಿನಿಮಾ ರಂಗದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಕೆ.ವಿ.ಎನ್ ಪ್ರೊಡಕ್ಷನ್ (KVN production) ನಡಿ ಜೋಗಿ ಪ್ರೇಮ್ ಧ್ರುವನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೆ ಈ ಸಿನಿಮಾಗೆ ಇನ್ನು ಹೆಸರಿಟ್ಟಿಲ್ಲ. #ಕೆವಿಎನ್ 4 (KVN4)ಎಂದು ವರ್ಕಿಂಗ್ ಟೈಟಲ್ ಇಟ್ಟು ಮುಹೂರ್ತ ಮಾಡಲಾಗಿದೆ. 

ಪ್ರೇಮ್ ಈ ಭಾರಿ ರೆಟ್ರೋ ಸ್ಟೈಲ್ ಸ್ಟೋರಿ ಹೆಣೆದಿದ್ದಾರೆ. ಇಷ್ಟು ದಿನ ಕಲರ್ಫುಲ್ ಮಾಸ್ ಸಿನಿಮಾ ಮಾಡುತ್ತಿದ್ದ ಧ್ರುವ ಈ ಭಾಗಿ ರೆಟ್ರೋ ಸ್ಟೈಲ್ನಲ್ಲಿ (Retro Style) ಹೊಸ ಪ್ರಯೋಗ ಮಾಡೋಕ್ಕೆ ಸಿದ್ಧರಾಗಿದ್ದಾರೆ. 1970 ಹಾಗು 80ನೇ ಇಸವಿಯ ಕಾಲಘಟ್ಟದಲ್ಲಿ ನಡೆಯೋ ಕತೆ ಸಿನಿಮಾದಲ್ಲಿರಲಿದೆಯಂತೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ 1970ರಲ್ಲಿ ಬೆಂಗಳೂರಿನಲ್ಲಿ ದರ್ಬಾರ್ ಮಾಡಿದ್ದ ಗ್ಯಾಂಗ್ ಸ್ಟರ್ ಒಬ್ಬನ ಪಾತ್ರದಲ್ಲಿ ಧ್ರುವ ಮಿಂಚಲಿದ್ದಾರಂತೆ. ಅರ್ಜುನ್ ಜನ್ಯಾ ಮ್ಯೂಸಿಕ್ ಈ ಸಿನಿಮಾದಲ್ಲೂ ಇರಲಿದೆ. ಕನ್ನಡದ ಹುಡುಗಿಯನ್ನೇ ಈ ಸಿನಿಮಾದ ನಾಯಕಿಯನ್ನಾಗಿ ಆಯ್ಕೆ ಮಾಡಲಾಗುತ್ತೆ ಅಂತ ಪ್ರೇಮ್ ಬಳಗದಿಂದ ಮಾಹಿತಿ ಇದೆ. 

 

Video Top Stories