ಜಗ್ಗೇಶ್ 'ರಾಘವೇಂದ್ರ ಸ್ಟೋರ್‌'ನಲ್ಲಿ ಕಾಮಿಡಿ ಕಚಗುಳಿ, ನೋಡಲು ಮರೆಯಬೇಡಿ..!

ಸ್ಯಾಂಡಲ್‌ವುಡ್‌ ನವರಸ ನಾಯಕ ಜಗ್ಗೇಶ್ (Jaggesh)  'ರಾಘವೇಂದ್ರ ಸ್ಟೋರ್' (Raghavendra stores) ಹೋಟೆಲ್ ಓಪನ್ ಆಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದಲ್ಲಿ ಸಿದ್ಧವಾಗಿರೋ  ಮತ್ತೊಂದು ಸಿನಿಮಾ ರಾಘವೇಂದ್ರ ಸ್ಟೋರ್.  

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ನವರಸ ನಾಯಕ ಜಗ್ಗೇಶ್ (Jaggesh) 'ರಾಘವೇಂದ್ರ ಸ್ಟೋರ್' (Raghavendra stores) ಹೋಟೆಲ್ ಓಪನ್ ಆಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದಲ್ಲಿ ಸಿದ್ಧವಾಗಿರೋ ಮತ್ತೊಂದು ಸಿನಿಮಾ ರಾಘವೇಂದ್ರ ಸ್ಟೋರ್.

ಬಾಕ್ಸಾಫೀಸ್‌ ಮೂನ್ ಸ್ಟಾರ್ ಯಶ್, ಮೊದಲ ದಿನದ KGF 2 ಗಳಿಕೆ ಎಷ್ಟು ಗೊತ್ತಾ.?

ಕೆಜಿಎಫ್‌ 2 ಗೆ ಬಂಡವಾಳ ಹೂಡಿದ್ದ ಹೊಂಬಾಳೆ ಫಿಲ್ಮ್ಸ್ ಈ ಹಿಂದೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಜಕುಮಾರ ಹಾಗೂ ಯುವರತ್ನ ಚಿತ್ರಗಳ ನಿರ್ಮಾಣ ಮಾಡಿತ್ತು. ಹೀಗಾಗಿ ಹೊಂಬಾಳೆ ಬ್ಯಾನರ್ನಲ್ಲಿ ಬರೋ ಸಿನಿಮಾಗಳಿಗೆ ಸಹಜವಾಗೆ ಕುತೂಹಲ ಇರುತ್ತೆ. ಇದೀಗ ರಾಘವೇಂದ್ರ ಸ್ಟೋರ್ ಟೀಸರ್ ನೋಡಿದ್ಮೇಲೆ ಇದು ಪಕ್ಕಾ ಕಾಮಿಡಿ ಸಿನಿಮಾ. ಈ ಸಿನಿಮಾನ ನೋಡಿ ನಗುವಿನಲ್ಲೇ ತೇಲಬಹುದು ಅಂತ ಗೊತ್ತಾಗ್ತಿದೆ. ಅದರಲ್ಲೂ ಜಗ್ಗೇಶ್ ಈ ಸಿನಿಮಾದ ನಾಯಕನಾಗಿರೋದು ರಾಘವೇಂದ್ರ ಸ್ಟೋರ್ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. 

 ಇದೇ ಮೊದಲ ಬಾರಿಗೆ ಹೊಂಬಾಳೆ ಫಿಲ್ಮ್ಸ್ ಜಗ್ಗೇಶ್ ಅವರ ಚಿತ್ರಕ್ಕೆ ಬಂಡವಾಳ ಹೂಡಿದೆ. ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ 40 ವರ್ಷ ದಾಟಿದರೂ ಮದುವೆಯಾಗದ ಅಡುಗೆ ಭಟ್ಟರ ಪಾತ್ರದಲ್ಲಿ ಜಗ್ಗೇಶ್ ನಟಿಸಿದ್ದು ಕಚಗುಳಿ ಇಟ್ಟಿದ್ದಾರೆ. ಇನ್ನೂ ಟೀಸರ್ ನಲ್ಲಿ ಪಂಚಿಂಗ್ ಹಾಗೂ ಡಬ್ಬಲ್ ಮೀನಿಂಗ್ ಡೈಲಾಗ್ ಗಳು ಗಮನ ಸೆಳೆಯುತ್ತವೆ. ಅಲ್ಲಿಗೆ ಈ ಸಿನಿಮಾ ರಾಘವೇಂದ್ರ ಸ್ಟೋರ್ನಲ್ಲಿರೋ ಇಡ್ಲಿ ವಡೆಯಷ್ಟೇ ರುಚಿ ರುಚಿಯಾಗಿರುತ್ತೆ ಅನ್ನುವುದಂತೂ ಪಕ್ಕಾ...!

Related Video