Asianet Suvarna News Asianet Suvarna News

ಸಿನಿಮಾದಲ್ಲಿ ಗಣೇಶ್ ರೊಮ್ಯಾನ್ಸ್ ದೃಶ್ಯ ನೋಡಿ ಪತ್ನಿ ಹೇಳಿದ್ದೇನು?

ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಗಾಳಿಪಟ-2 ಸಿನಿಮಾ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಈ ಸಿನಿಮಾ ವಿಚಾರವಾಗಿ ಗಣಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಗಾಳಿಪಟ-2 ಸಿನಿಮಾದ ವೇಳೆ ಮರಯೆಲಾಗದ ಕೆಲವು ಘಟನೆಗಳನ್ನು ಗಣೇಶ್ ಬಿಚ್ಚಿಟ್ಟಿದ್ದಾರೆ.

Aug 13, 2022, 4:33 PM IST

ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಗಾಳಿಪಟ-2 ಸಿನಿಮಾ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಈ ಸಿನಿಮಾ ವಿಚಾರವಾಗಿ ಗಣಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಗಾಳಿಪಟ-2 ಸಿನಿಮಾದ ವೇಳೆ ಮರಯೆಲಾಗದ ಕೆಲವು ಘಟನೆಗಳನ್ನು ಗಣೇಶ್ ಬಿಚ್ಚಿಟ್ಟಿದ್ದಾರೆ. ರ್ಯಾಪಿಡ್ ಫೈರ್ ರೌಂಡ್‌ಗೆ ಗಣೇಶ್ ಉತ್ತರ ನೀಡಿದ್ದಾರೆ. ಭಟ್ಟರ ಜೊತೆ ಗಣೇಶ್ ನಾನು ಮಾಡಲ್ಲ ಅಂತ ಜಗಳ ಆಡಿದ್ದು ಯಾವ ವಿಚಾರಕ್ಕೆ ಎಂದು ಕೇಳಿದ ಪ್ರಶ್ನೆಗೆ ಯಾವ ವಿಚಾರಕ್ಕೂ ಜಗಳ ಆಡಿಲ್ಲ ಎಂದು ಹೇಳಿದರು. ಗಾಳಿಪಟ-2ನಲ್ಲಿ ಎಲ್ಲಾ ವಿಚಾರವೂ ಬೆಸ್ಟ್ ಎಂದುಹೇಳಿದರು. ಅದರಲ್ಲೂ ಟೈಟಲ್ ಟ್ರ್ಯಾಕ್ ಮಾಡಿದ್ದು ಅದ್ಭುತವಾಗಿತ್ತು ಎಂದಿದ್ದಾರೆ. ಇನ್ನು ಸಿನಿಮಾದಲ್ಲಿ ರೊಮ್ಯಾಂಟಿಕ್ ದೃಶ್ಯ ನೋಡಿ ಪತ್ನಿ ಏನು ಹೇಳುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಗಣೇಶ್ ಸಿನಿಮಾದಲ್ಲಿ ಹಾಗೆಲ್ಲ ಮಾಡುತ್ತೀಯಾ ಮನೆಯಲ್ಲಿ ಯಾಕಿಲ್ಲ ಎಂದು ಕೇಳುತ್ತಾರೆ ಅಂತ ಉತ್ತರಿಸಿದರು.