ಕೆಸಿ‌ಸಿ ಕ್ರಿಕೆಟ್ ಟೂರ್ನಮೆಂಟ್‌ಗೆ ಮೈದಾನ ಸಿದ್ಧ: ಕನ್ನಡದ ದಿಗ್ಗಜ ನಟರ ತಂಡಗಳು ಯಾವುವು?

ಕರ್ನಾಟಕ ಚಲನಚಿತ್ರ ಕಪ್ ಆವೃತ್ತಿ ಮೂರು, ಫೆಬ್ರವರಿ 25 ಮತ್ತು 26ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿ‌ಸಿ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದೆ. ಹೀಗಾಗಿ ಚಿನ್ನಸ್ವಾಮಿ ಮೈದಾನದ ಲಾಂಜ್'ನಲ್ಲಿ ಕೆಸಿಸಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಈ ಪ್ಲೇಯರ್ಸ್ ಸೆಲೆಕ್ಷನ್ ಈವೆಂಟ್'ನಲ್ಲಿ ಸ್ಯಾಂಡಲ್ ವುಡ್ ಟಾಪ್ ತಾರೆಯರ ಸಮಾಗಮ ಆಗಿತ್ತು. ಕಿಚ್ಚ ಸುದೀಪ್, ಶಿವಣ್ಣ, ಅಶ್ವಿನಿ ಪುನೀತ್ ರಾಜ್ ಕುಮಾರ್, ರಮ್ಯಾ, ಡಾಲಿ ಧನಂಜಯ್, ಧ್ರುವ ಸರ್ಜಾ, ಗಣೇಶ್, ಜಗ್ಗೇಶ್, ತಾರಾ, ಶೃತಿ, ಸುಧಾರಾಣಿ ಮಾಲಾಶ್ರೀ, ಶರಣ್ ಸೇರಿದಂತೆ ನಿರ್ಮಾಪಕ, ನಿರ್ದೇಶಕರು ಒಟ್ಟಿಗೆ ಕಾಣಿಸಿದ್ರು. ಕೆಸಿಸಿ ಪಾರ್ಟ್ 3ನಲ್ಲಿ ಕನ್ನಡದ ಆರು ದಿಗ್ಗಜ ನಟರು, ಆರು ತಂಡಗಳಿಗೆ ಫೇಸ್ ಆಫ್ ದಿ ಟೀಂ ಆಗಿದ್ದಾರೆ. ಶಿವರಾಜ್ ಕುಮಾರ್ ಒಡೆಯರ್ ಚಾರ್ಜಸ್, ಸುದೀಪ್ ಹೊಯ್ಸಳ ಈಗಲ್ಸ್, ಧ್ರುವ ಸರ್ಜಾ ರಾಷ್ಟ್ರಕೂಟ ಪ್ಯಾಂಥರ್ಸ್, ಗಣೇಶ್ ಕದಂಬ ಲಯನ್ಸ್, ಡಾಲಿ ಧನಂಜಯ್ ಗಂಗಾ ವಾರಿಯರ್ಸ್, ರಿಯಲ್ ಸ್ಟಾರ್ ಉಪೇಂದ್ರ ವಿಜಯ ನಗರ ಪೇಟ್ರಿಯಾಡ್ಸ್ ತಂಡ ಸೇರಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video