ಅಪ್ಪುಗಾಗಿ ಎಷ್ಟು ಹಾಡು ಬೇಕಾದ್ರೂ ಹಾಡ್ತೀನಿ; ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ

ಪುನೀತ ಪರ್ವ ಕಾರ್ಯಕ್ರಮಕ್ಕೆ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಆಗಮಿಸಿದ್ದಾರೆ. ಪುನೀತ್‌ಗೆ ಎಷ್ಟು ಬೇಕಾದರೂ ಹಾಡುತ್ತೇನೆ ಎಂದು ಹೇಳಿದ್ದಾರೆ. 

First Published Oct 21, 2022, 2:38 PM IST | Last Updated Oct 21, 2022, 2:42 PM IST

ಬೆಂಗಳೂರಿನಲ್ಲಿ ನಡೆಯುತ್ತಿರುವ ಪುನೀತ ಪರ್ವ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಆಗಮಿಸಿದ್ದಾರೆ. ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಕೂಡ ಆಗಮಿಸಿದ್ದು ಹಾಡುಗಳ ಮೂಲಕ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ನನಗೆ ಅಪ್ಪು ಗೊತ್ತಿರಲಿಲ್ಲ, ರಾಜ್ ಕುಮಾರ್ ಗೊತ್ತಿತ್ತು. ಪ್ರಕೃತಿ ಬನವಾಸಿ ಹೇಳಿದರು. ರಾಜ್ ಕುಮಾರ್ ಮಗ ಎಂದಾಕ್ಷಣ ಗೊತ್ತಾಯಿತು. ಬಳಿಕ ಅಪ್ಪು ಹಾಡುಗಳಿಗೆ ನಾನು ಹಾಡಿದೆ. ನೀನೆ ನೀನೆ....ಹಾಡು ಹಾಗೂ ಕಿವಿ ಮಾತೊಂದು ಹಾಡು ತುಂಬಾ ಇಷ್ಟ ಎಂದು ಹೇಳಿದರು. ಇವತ್ತು ಅಪ್ಪುಗಾಗಿ ಎಷ್ಟು ಬೇಕಾದರೂ ಹಾಡುತ್ತೇನೆ ಎಂದು ಹೇಳಿದರು.