ಗುರುಪ್ರಸಾದ್ ಕೊನೆಯ ಚಿತ್ರ 'ಎದ್ದೇಳು ಮಂಜುನಾಥ-2' ರಿಲೀಸ್‌ಗೆ ಸಿದ್ಧ; ಮಾಡುತ್ತಾ ಮ್ಯಾಜಿಕ್?

ಗುರುಪ್ರಸಾದ್ ಕನ್ನಡ ಸಿನಿರಂಗದಲ್ಲಿ ಸ್ಪೆಷಲ್ ಡೈರೆಕ್ಟರ್ ಅಂತಲೇ ಹೆಸರು ಮಾಡಿದವರು. ಅವರ ನಿರ್ದೇಶನದ ಮಠ, ಎದ್ದೇಳು ಮಂಜುನಾಥ ಸಿನಿಮಾಗಳು ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ವು. ಇಂಥಾ ಪ್ರತಿಭಾನ್ವಿತ ನಿರ್ದೇಶಕ ಕಳೆದ ಅಕ್ಟೋಬರ್ ತಿಂಗಳಲ್ಲಿ..

First Published Jan 13, 2025, 4:28 PM IST | Last Updated Jan 13, 2025, 4:28 PM IST

ಸ್ಯಾಂಡ್​ವುಡ್​ನ ಪ್ರತಿಭಾನ್ವಿತ ನಿರ್ದೇಶಕ ಗುರುಪ್ರಸಾದ್ (Guruprasad) ಕಳೆದ ಅಕ್ಟೋಬರ್​​ನಲ್ಲಿ ಆತ್ಮಹತ್ಯೆಗೆ ಶರಣಾಗಿ ಎಲ್ಲರಿಗೂ ಶಾಕ್ ಕೊಟ್ಟಿದ್ರು. ಗುರು ನಮ್ಮಿಂದ ದೂರವಾದ್ರೂ ಅವರು ನಿರ್ದೇಶನ ಮಾಡಿದ ಕೊನೆಯ ಚಿತ್ರ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಿದ್ದವಾಗಿದೆ. ಎದ್ದೇಳು ಮಂಜುನಾಥ-2 ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಾ ಇದೆ. 

ಗುರುಪ್ರಸಾದ್ ಕನ್ನಡ ಸಿನಿರಂಗದಲ್ಲಿ ಸ್ಪೆಷಲ್ ಡೈರೆಕ್ಟರ್ ಅಂತಲೇ ಹೆಸರು ಮಾಡಿದವರು. ಅವರ ನಿರ್ದೇಶನದ ಮಠ, ಎದ್ದೇಳು ಮಂಜುನಾಥ ಸಿನಿಮಾಗಳು ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ವು. ಇಂಥಾ ಪ್ರತಿಭಾನ್ವಿತ ನಿರ್ದೇಶಕ ಕಳೆದ ಅಕ್ಟೋಬರ್ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾಗಿ ಎಲ್ಲರಿಗೂ ಶಾಕ್ ಕೊಟ್ಟಿದ್ರು.

ಗುರು ನಮ್ಮಿಂದ ಮರೆಯಾದರೂ ಅವರು ನಿರ್ದೇಶಿಸಿದ ಕೊನೆ ಚಿತ್ರ ನಮ್ಮೆದುರು ಬರೋದಕ್ಕೆ ಸಜ್ಜಾಗಿದೆ. ಗುರುಪ್ರಸಾದ್ ನಿರ್ದೇಶನದ ಜೊತೆಗೆ ನಟನೆ ಮಾಡಿರೋ ಎದ್ದೇಳು ಮಂಜುನಾಥ-2 ಮೊದಲ ಸಾಂಗ್ ರಿಲೀಸ್ ಆಗಿದೆ. 

ಸಾಂಗ್​ನ ಆರಂಭದಲ್ಲಿರೋ ಗುರುವಿನ ಪಂಚಿಂಗ್ ಡೈಲಾಗ್, ಅನೂಪ್ ಸಂಗೀತ, ನವೀನ್ ಸಜ್ಜು ಗಾಯನ ಎಲ್ಲವೂ ಸಖತ್ ಮಜಾ ಕೊಡ್ತಿವೆ. ಈ ಹಾಡನ್ನ ನೋಡ್ತಾ ಇದ್ರೆ ಮತ್ತೆ ಗುರು ಮ್ಯಾಜಿಕ್ ಇದ್ರಲ್ಲಿದೆ ಅನ್ನೋದು ಗೊತ್ತಾಗುತ್ತೆ. ಸೋ ಮಂಜುನಾಥ ಎದ್ದೇಳುವ ಸೂಚನೆ ನೀಡಿದ್ದಾನೆ. ಆದ್ರೆ ಗುರುಪ್ರಸಾದ್ ಮತ್ತೆ ಎದ್ದು ಬರೋದಿಲ್ಲ ಅನ್ನೋದು ಮಾತ್ರ ಮರೆಯಾಗದ ದುರಂತ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

Video Top Stories