ಡಾಲಿ ಧನಂಜಯ್ ಹೆಗಲ ಮೇಲೆ ಕೈ ಹಾಕಿದ ಧ್ರುವ ಸರ್ಜಾ; ದರ್ಶನ್ ಎದುರು ಒಟ್ಟಾಗಿ ನಿಂತ್ರಾ?

ದರ್ಶನ್ ಬಳಗದಿಂದ ದೂರವಾಗಿರುವ ಧ್ರುವ ಸರ್ಜಾ & ಡಾಲಿ. ಡಾಲಿ ಧನಂಜಯ್ ಮದುವೆಗೂ ಬರಲಿಲ್ಲ ದರ್ಶನ್. ಧ್ರುವ & ದರ್ಶನ್ ಫ್ಯಾನ್ಸ್ ನಡುವೆ ನಡೀತಿದೆ ಮುಸುಕಿನ ಗುದ್ದಾಟ.

Vaishnavi Chandrashekar  | Updated: Mar 22, 2025, 12:06 PM IST

ಡಾಲಿ ಧನಂಜಯ್ ನಟನೆ-ನಿರ್ಮಾಣದ ವಿದ್ಯಾಪತಿ ಚಿತ್ರದ ಟ್ರೈಲರ್ ಲಾಂಚ್​ಗೆ ಆಕ್ಷನ್ ಪ್ರಿನ್ಸ್ ಧ್ರುವ ಅತಿಥಿಯಗಿ ಬಂದಿದ್ದು, ಸ್ಯಾಂಡಲ್​ವುಡ್​​ನಲ್ಲಿ ಸಂಚಲನ ಮೂಡಿಸಿದೆ.  ಧ್ರುವ-ಡಾಲಿ ದೋಸ್ತಿ ಹೊಸದೇನೂ ಅಲ್ಲ. ಆದ್ರೆ ಈ ಇಬ್ಬರೂ ಈಗ ದರ್ಶನ್ ಬಳಗದಿಂದ ದೂರವಾಗಿದ್ದಾರೆ. ಸೋ ಇಬ್ಬರು ಸೇರಿ ದಾಸನಿಗೆ ಡಿಚ್ಚಿ ಕೊಡೋದಕ್ಕೆ ಸಿದ್ದವಾದ್ರಾ? ಧ್ರುವ ನಟನೆಯ ಮಾರ್ಟಿನ್ ಸಿನಿಮಾ ತೆರೆಗೆ ಬಂದಾಗ ಅದರ ವಿರುದ್ದ ದರ್ಶನ್ ಫ್ಯಾನ್ಸ್ ಅಪಪ್ರಚಾರಕ್ಕೆ ಇಳಿದಿದ್ರು. ಇದೂ ಕೂಡ ಇಬ್ಬರ ಫ್ಯಾನ್ಸ್ ನಡುವೆ ತಿಕ್ಕಾಟಕ್ಕೆ ಕಾರಣ ಆಗಿತ್ತು.ಇನ್ನೂ ಡಾಲಿ ಧನಂಜಯ್ ಜೊತೆಗೂ ದರ್ಶನ್ ಸಂಬಂಧ ಹಳಸಿದೆ. ಅಸಲಿಗೆ ಯಜಮಾನ ಸಿನಿಮಾದಲ್ಲಿ ದರ್ಶನ್ ಎದುರು ಡಾಲಿ ವಿಲನ್ ಆಗಿ ನಟಿಸಿದ್ರು. ಆಗ ಇಬ್ಬರ ನಡುವೆ ಸಂಬಂಧ ಚೆನ್ನಾಗೇ ಇತ್ತು. ಆದ್ರೆ ದರ್ಶನ್ ಜೈಲು ಪಾಲಾದ ವೇಳೆ ಡಾಲಿ ಆಡಿದ ಮಾತುಗಳು ದಾಸನ ಫ್ಯಾನ್ಸ್​ಗೆ ಸಿಟ್ಟು ತರಿಸಿದ್ವು. ಇನ್ನೂ ದರ್ಶನ್ ಕೂಡ ಬೇಲ್ ಮೇಲೆ ಹೊರಬಂದ ಬಳಿಕ ಡಾಲಿನ ದೂರವೇ ಇರಿಸಿದ್ದಾರೆ.

 

Read More...