Asianet Suvarna News Asianet Suvarna News

Yuva Rajkumar: ಪುನೀತ್ ಉತ್ತರಾಧಿಕಾರಿ ಯುವ: ದೊಡ್ಮನೆ ಹುಡುಗನಿಗೆ ಭಾರೀ ಡಿಮ್ಯಾಂಡ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಯುವ ರಾಜ್ ಕುಮಾರ್. ಸ್ಯಾಂಡಲ್ ವುಡ್ ಜ್ಯೂ. ಪವರ್ ಸ್ಟಾರ್ ಅಂತಲೇ ಯುವನನ್ನು ಕರೆಯಲಾಗ್ತಿದೆ. 
 

ದೊಡ್ಮನೆಯ ಮೂರನೇ ತಲೆಮಾರಿನ ಈ ಸ್ಟೈಲೀಶ್ ಹುಡುಗ ಈಗ ಬೆಳ್ಳಿತೆರೆ ಮೇಲೆ ವಿಜೃಂಭಿಸಿ ದೊಡ್ಮನೆ ಹೆಸರನ್ನು ಹೆಗಲ ಮೇಲೆ ಹೊತ್ತು ಮುನ್ನಡೆಯಬೇಕಿದೆ. ಹಾಗಾದ್ರೆ ಅದು ಯುವರಾಜ್ ಕುಮಾರ್ ಅವರಿಂದ ಸಾಧ್ಯನಾ ಅಂತ ಕೇಳಿದ್ರೆ ಖಂಡಿತ ಆಗುತ್ತೆ ಎನ್ನುತ್ತಿದೆ ಸ್ಯಾಂಡಲ್ ವುಡ್. ಹಾಗೂ ದೊಡ್ಮನೆ ಅಭಿಮಾನಿ ಬಳಗ. ಅದು ನಿಜ ಕೂಡ. ಯಾಕಂದ್ರೆ ಯುವ ರಾಜ್ ಕುಮಾರ್ ಸ್ಯಾಂಡಲ್ ವುಡ್'ಗೆ ಎಂಟ್ರಿ ಕೊಡೋ ಮೊದಲ ಸಿನಿಮಾ ಇನ್ನು ಸೆಟ್ಟೇರಿಲ್ಲ. ಆದಾಗ್ಲೆ ದೊಡ್ಮನೆ ಯಂಗ್ ಬಾಯ್ ಯುವರಾಜ್ ಕುಮಾರ್ ಗೆ ಭಾರೀ ಡಿಮ್ಯಾಂಡ್ ಬಂದಿದೆ. ಯಾವ್ ಮಟ್ಟಕ್ಕೆ ಅಂದ್ರೆ ಯುವನಿಗಾಗಿ ನಾಲ್ಕು ಸಿನಿಮಾಗಳು ರೆಡಿಯಾಗಿವೆ. ಜ್ಯೂ. ಪವರ್ ಸ್ಟಾರ್ ಮೊದಲ ಸಿನಿಮಾ ನಿರ್ಮಾಣ ಮಾಡೋದು ಭಾರತೀಯ ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಲಿದೆ. ಇನ್ನು ಎರಡನೇ ಸಿನಿಮಾ ಕೂಡ ಹೊಂಬಾಳೆ ಬ್ಯಾನರ್'ನಲ್ಲಿ ಮೂಡಿ ಬರಲಿದೆ. ಯುವನ ಎರಡನೇ ಚಿತ್ರಕ್ಕೆ  ಶ್ರೀಲೇಶ್ ಎಸ್. ನಾಯರ್ ನಿರ್ದೇಶಕ ಆಗೋ ಸಾಧ್ಯತೆ ಇದೆ. ಇನ್ನು ಮೂರನೇ ಸಿನಿಮಾವನ್ನು ಪುನೀತ್ ರಾಜ್ ಕುಮಾರ್ರ ಪಿ‌.ಆರ್.ಕೆ ಬ್ಯಾನರ್'ನಲ್ಲಿ ಯುವ ರಾಜ್ ಕುಮಾರ್ ನಟಿಸಲಿದ್ದಾರೆ. ಅಷ್ಟೆ ಅಲ್ಲ ನಾಲ್ಕನೇ ಸಿನಿಮಾ ಕೂಡ ಹೊಂಬಾಳೆ ಬ್ಯಾನರ್'ನಲ್ಲಿ ಸೆಟ್ಟೇರಲಿದೆ. 

Bond Ravi ಡಿ. 9 ರಿಲೀಸ್; ಮಾಸ್‌ ಲುಕ್ ಹೊತ್ತು ಬರ್ತಿದ್ದಾನೆ ಪ್ರೀಮಿಯರ್ ಹೀರೋ