ವರ್ಕ್​ ಆಯ್ತು ದರ್ಶನ್ ಪ್ಲಾನ್; ಬೆನ್ನು ನೋವು ಮಾಯ...ಇಲ್ಲ ಸರ್ಜರಿ ಗಾಯ ಸಿಗ್ತು ಫುಲ್ ರಿಲೀಫ್!

ಪವಿತ್ರಾ ಗೌಡಗೂ ರಿಲೀಫ್.. ಸುಬ್ಬ-ಸುಬ್ಬಿ ಪುನರ್ಮಿಲನ. ಮುಂದೇನು ಕೇಸ್ ಗತಿ..? ರೇಣುಕಾ ಆತ್ಮಕ್ಕೆ ಸಿಗಲ್ವಾ ಮುಕ್ತಿ..?ಮರ್ಡರ್ ಕೇಸ್ ಮುಕ್ತಾಯ ಆಗಿಲ್ಲ.. ಪಿಕ್ಚರ್ ಅಭೀ ಬಾಕಿ ಹೈ.

Vaishnavi Chandrashekar  | Published: Dec 14, 2024, 4:27 PM IST

ಇಷ್ಟು ದಿನ ಮೆಡಿಕಲ್ ಗ್ರೌಂಡ್ಸ್ ಮೇಲೆ ಮಧ್ಯಂತರ ಬೇಲ್ ಪಡೆದು ಆಸ್ಪತ್ರೆ ಸೇರಿದ್ದ ದರ್ಶನ್‌ಗೆ ರೆಗ್ಯೂಲರ್ ಬೇಲ್ ಮಂಜೂರಾಗಿದೆ. ಹೈಕೋರ್ಟ್ ರೇಣುಕಾಸ್ವಾಮಿ ಮರ್ಡರ್ ಕೇಸ್​​ನಲ್ಲಿ ಎ1 ಆಗಿರೋ ಪವಿತ್ರಾ ಗೌಡ, ಎ2 ದರ್ಶನ್ ಸೇರಿದಂತೆ ಒಟ್ಟು ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಅಲ್ಲಿಗೆ ಈ ಕೇಸ್​ನಲ್ಲಿ ಅಂದರ್ ಆಗಿದ್ದ ಕಿಲ್ಲರ್ ಗಳೆಲ್ಲಾ ಬಾಹರ್ ಬರ್ತಿದ್ದಾರೆ. ಹಾಗಾದ್ರೆ ಈ ಕೇಸ್​ ಮುಂದೆ ಎಲ್ಲಿಗೆ ಹೋಗಿ ತಲುಪಲಿದೆ..? ರೇಣುಕಾಸ್ವಾಮಿಗೆ ನ್ಯಾಯ ಸಿಕ್ಕಲ್ವಾ..? ಆತನ ಅತ್ಮಕ್ಕೆ ಮುಕ್ತಿ ದಕ್ಕಲ್ವಾ? ಈ ಪ್ರಕರಣದ ಕೇಂದ್ರಬಿಂದು ಪವಿತ್ರಾ ಗೌಡ ರಿಲೀಸ್ ಆಗ್ತಾ ಇದ್ದಾಳೆ. ಭರ್ತಿ 5 ತಿಂಗಳ ನಂತರ ಸುಬ್ಬ-ಸುಬ್ಬಿ ಸೇರಲಿದ್ದಾರೆ. ಈ ಕೇಸ್​​ ನಲ್ಲಿ ಎ4 ಆಗಿದ್ದ ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ12 ಲಕ್ಷ್ಮಣ್, ಎ11 ನಾಗರಾಜ್, ಎ14 ಪ್ರದೋಷ್​​ಗೂ ಜಾಮೀನು ಮಂಜೂರು ಮಾಡಲಾಗಿದೆ. ಅಲ್ಲಿಗೆ ಎಲ್ಲಾ ಈ ಗ್ಯಾಂಗ್ ಹೊರಬಂದಂತೆ ಆಗಿದೆ.

ಕೂದಲು ಬಣ್ಣ ಬದಲಾಯಿಸಿದ ಹಿರಿಯ ನಟ ರಾಮ್‌ಕುಮಾರ್ ಪುತ್ರಿ ಧನ್ಯಾ; ಫೋಟೋ ವೈರಲ್!