ಕೂದಲು ಬಣ್ಣ ಬದಲಾಯಿಸಿದ ಹಿರಿಯ ನಟ ರಾಮ್‌ಕುಮಾರ್ ಪುತ್ರಿ ಧನ್ಯಾ; ಫೋಟೋ ವೈರಲ್!
ವರ್ಷದ ಕೊನೆಯಲ್ಲಿ ಚೇಂಜ್ ಇರಲಿ ಎಂದು ಕೂದಲ ಬಣ್ಣ ಬದಲಾಯಿಸಿದ ಧನ್ಯಾ.....ನೆಟ್ಟಿಗರಿಂದ ಭಾರಿ ಮೆಚ್ಚುಗೆ.....
2021ರಲ್ಲಿ ನಿನ್ನ ಸನಿಹಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದೊಡ್ಡಮನೆ ಕುಡಿ ಧನ್ಯಾ ರಾಜ್‌ಕುಮಾರ್. ಅಣ್ಣಾವ್ರ ಮೊಮ್ಮಗಳ ಮೊದಲ ಚಿತ್ರವೇ ಸೂಪರ್ ಹಿಟ್ ಪ್ರದರ್ಶನ ಕಂಡಿದೆ.
ನಿನ್ನ ಸನಿಹಕೆ ಚಿತ್ರದ ನಂತರ ಹೈಡ್ ಆಂಡ್ ಸೀಕ್, ದಿ ಜಡ್ಜ್‌ಮೆಂಟ್, ಪೌಡರ್ ಮತ್ತು ಕಾಲಪತ್ಥರ್ ಸಿನಿಮಾದಲ್ಲಿ ಧನ್ಯಾ ರಾಜ್‌ಕುಮಾರ್ ಅಭಿನಯಿಸಿದ್ದಾರೆ. ಈ ವರ್ಷ ನಾಲ್ಕು ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿದೆ.
ಸಿಕ್ಕಾಪಟ್ಟೆ ಫಿಟ್ನೆಸ್ ಮತ್ತು ಬ್ಯೂಟಿ ಕಾನ್ಶಿಯಸ್ ಆಗಿರುವ ಧನ್ಯಾ ರಾಮ್‌ಕುಮಾರ್ ಇದೀಗ ತಮ್ಮ ಹೇರ್ ಕಲರ್‌ನ ಬದಲಾಯಿಸಿಕೊಂಡಿದ್ದಾರೆ. ಈ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚಿತ್ರರಂಗಕ್ಕೆ ಕಾಲಿಡುವ ಮುನ್ನ ಧನ್ಯಾ ರಾಮ್‌ಕುಮಾರ್ ಕೂದಲು ಸಿಕ್ಕಾಪಟ್ಟೆ ಉದ್ದವಿತ್ತು...ಪಾತ್ರಕ್ಕೆ ತಕ್ಕಂತೆ ಕಟ್ ಆಂಡ್ ಶೇಪ್ ಮಾಡಿಸಿಕೊಂಡಿದ್ದರು. ಇದೀಗ ಕಲರ್ ಬದಲಾಯಿಸಿದ್ದಾರೆ.
ಕಪ್ಪು ಬಣ್ಣದ ಕೂದಲಿಗೆ ಇದೀಗ ಗೋಲ್ಡ್ ಬ್ಲಾಂಡ್ ಶೇಡ್ ನೀಡಿದ್ದಾರೆ. ಧನ್ಯಾ ರಾಮ್‌ಕುಮಾರ್ ಹೇರ್ ಮೇಕ್‌ಓವರ್ ಮಾಡಿರುವುದು ಸಾರಾ ಎಂಬ ವ್ಯಕ್ತಿ ಈ ಲುಕ್‌ನ ಹಂಚಿಕೊಂಡಿದ್ದಾರೆ.
ದೊಡ್ಡ ಮನೆಯಿಂದ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿರುವ ಮೊದಲ ಮಹಿಳ ಧನ್ಯಾ ರಾಮ್‌ಕುಮಾರ್. ಜನರ ಪ್ರೀತಿ ಗಳಿಸಬೇಕು ಸೈ ಎನ್ನಿಸಿಕೊಳ್ಳಬೇಕು ಎಂದು ನಟನೆ ತರಬೇತಿ ಪಡೆದು ತಮ್ಮ ಜರ್ನಿಯನ್ನು ಆರಂಭಿಸಿದ್ದರು.